ಲೇಖಕ ಇಂದೂಧರ ಹೊನ್ನಾಪುರ ಅವರ ಕೃತಿ-ಉಳಿದದ್ದು ಸಂವಿಧಾನ: ವರ್ತಮಾನದ ತಲ್ಲಣಗಳು. ಭಾರತದ ಸಂವಿಧಾನ ರಚನೆ ಕುರಿತಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಪ್ರಶಂಸೆ ಇರುವಾಗ ದೇಶದಲ್ಲೇ ಕೆಲವೇ ಕೆಲವು ಜನ ಬಹುಸಂಖ್ಯಾತರಿಗೆ ತಪ್ಪು ಮಾಹಿತಿ ನೀಡಿ ಗಲಭೆ-ಅಸಮಾಧಾನಗಳಿಗೆ ಕಾರಣವಾಗುತ್ತಿರುವುದು ವರ್ತಮಾನದಲ್ಲಿ ಸಾರ್ವಜನಿಕ ತಲ್ಲಣಗಳಿಗೆ ಕಾರಣವಾಗುತ್ತಿದೆ. ಇಂತಹ ವಿಚಾರಗಳ ಹಿನ್ನೆಲೆಯಲ್ಲಿ ಚರ್ಚಿಸಿದ ಕೃತಿ ಇದು.
ಲೇಖಕ ಇಂದೂಧರ ಹೊನ್ನಾಪುರ ಅವರು ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ಗ್ರಾಮದವರು. ಮೈಸೂರಿನ ಕಾಲೇಜಿನಲ್ಲಿ ಪತ್ರಿಕೋದ್ಯಮದ ಪದವೀಧರರು. ವಿದ್ಯಾರ್ಥಿ ದಿಸೆಯಲ್ಲೇ 'ಪಂಚಮ' ಪತ್ರಿಕೆ ಪ್ರಕಟಿಸಿ, ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಪಿರಿಯಾಪಟ್ಟಣದಲ್ಲಿ ನಡೆದ 16ನೇ ಮೈಸೂರು ಜಿಲ್ಲಾ ಕನ್ನಡ (2018) ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿಗಳು ಲಭಿಸಿವೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿದೆ. ಜಲಕಲ್ಯಾಣ ಟ್ರಸ್ಟ್ ಅಧ್ಯಕ್ಷರಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ನೀಡುತ್ತಿದ್ದಾರೆ. ...
READ MORE