‘ವೈಜ್ಞಾನಿಕತೆ’ ಜೆ.ಆರ್.ಲಕ್ಷ್ಮಣರಾವ್ ಅವರ ವೈಜ್ಞಾನಿಕ ಬರಹವಾಗಿದೆ. ವೈಜ್ಞಾನಿಕ ವಿಷಯಗಳಿಗೆ ನಿಷ್ಠನಾಗಿ ವಿಜ್ಞಾನಿ ತಳೆಯಬೇಕಾದ ವೈಜ್ಞಾನಿಕ ಒಲವು ಇರುವಂಥ ಒಂದು ಮನೋಪ್ರವೃತ್ತಿಯನ್ನು ಇಲ್ಲಿ ಪ್ರೊ ಜೆ. ಆರ್. ಲಕ್ಷ್ಮಣ ರಾವ್ ಸೂಕ್ಷ ವಾಗಿ ವಿವರಿಸಿದ್ದಾರೆ.
ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಆರ್. ಲಕ್ಷ್ಮಣರಾವ್ ಎಂದೇ ಚಿರಪರಿಚಿತರು. 1921 ಜನವರಿ 21 ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್ ಮತ್ತು ತಾಯಿ ನಾಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಸಿದ ಅವರು ಪ್ರೌಢ ಶಾಲೆಯ ಅಭ್ಯಾಸ ದಾವಣಗೆರೆಯಲ್ಲಿ ಪೂರ್ಣಗೊಳಿಸಿದರು. ಈಗ ಯುವರಾಜ ಕಾಲೇಜು ಎಂದು ಕರೆಯಲಾಗುವ ’ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್’ ಅಧ್ಯಯನ ಮುಂದುವರೆಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ರಸಾಯನ ಶಾಸ್ತ್ರದಲ್ಲಿ ಎಮ್ಮೆಸ್ಸಿ ಪದವಿ ಪಡೆದರು. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯಾರಂಭ ಮಾಡಿದ ಅವರು ಬೆಂಗಳೂರಿನ ಸೇಂಟ್ರಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ...
READ MOREಹೊಸತು-ಡಿಸೆಂಬರ್-2002
ಭೌತಿಕ ನಿಯಮಗಳಿಗನುಸಾರವಾಗಿ ಪ್ರಯೋಗಿಸಲ್ಪಟ್ಟು ಯಶಸ್ವಿ ಯಾಗಿರುವ ಸಿದ್ಧಾಂತವನ್ನು ಒಪ್ಪಿಕೊಳ್ಳುವುದೇ ವಿಜ್ಞಾನದಪರಿಭಾಷೆಯಾಗಿದ್ದು ಹೇಳಿಕೆಯ ಮಾತುಗಳೊಂದೂ ಇಲ್ಲಿ ಗಣನೆಗೆ ಬರಲಾರವು. ಸಂಪೂರ್ಣವಾಗಿ ವೈಜ್ಞಾನಿಕ ವಿಷಯಗಳಿಗೆ ನಿಷ್ಠನಾಗಿ ವಿಜ್ಞಾನಿ ತಳೆಯಬೇಕಾದ ವೈಜ್ಞಾನಿಕ ಒಲವು ಇರುವಂಥ ಒಂದು ಮನೋಪ್ರವೃತ್ತಿಯನ್ನು ಇಲ್ಲಿ ಪ್ರೊ| ಜೆ. ಆರ್. ಲಕ್ಷ್ಮಣ ರಾವ್ ಸೂಕ್ಷ್ಮವಾಗಿ ವಿವರಿಸಿದ್ದಾರೆ.