ಚಿಂತೆಯು ಚಿತೆವರೆಗೂ ಕೊಂಡೊಯ್ಯಬಹುದು. ಈ ಕುರಿತು ಚಿಂತನೆಗಳನ್ನು ಈ ಕೃತಿ ಒಳಗೊಂಡಿದೆ. ಸಾವಿರ ಸಾವಿರ ಚಿಂತೆಗಳ ಸಂತೆಯಲ್ಲಿ ಕಳೆದು ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಶರಣರ ಅನುಭಾವದ ನುಡಿ ಬೆಳಕಿನಲ್ಲಿ ವಿಚಾರ ಮಾಡುವ, ವಿಶ್ಲೇಷಿಸುವ ‘ತನ್ನ ತಾನು ತಿಳಿದ ಮೇಲೆ' ಚಿಂತನೆಗಳ ಸಂಕಲನ ಮೌಲಿಕ ಕೃತಿಯನ್ನು ಲೇಖಕ ರಮೇಶಬಾಬು ಯಾಳಗಿ ಅವರು ನೀಡಿದ್ದಾರೆ.
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE