ರಮೇಶ ಬಾಬು ಯಾಳಗಿ ಅವರು ದೈನಂದಿನ ಬದುಕಿನ ಹಲವಾರು ಸಾಮಾಜಿಕ ಸಮಸ್ಯೆಗಳನ್ನು, ಬದುಕಿನ ವೈರುಧ್ಯ-ವಿಕೃತಿಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿದ ರೀತಿ ಓದುಗರ ಕುತೂಹಲಗಳನ್ನು ಸಂತೈಸುತ್ತದೆ. ಶರಣರ ಚಿಂತನೆಯನ್ನು ಪ್ರಸ್ತುತ ಕಾಲಘಟಕ್ಕೆ ವ್ಯಾಖ್ಯಾನಿಸಿ ನೋಡಿರುವುದು ಈ ಲೇಖನಗಳ ಮತ್ತೊಂದು ವಿಶೇಷ. ಜಾತ್ಯತೀತ ಪರಿಕಲ್ಪನೆ, ಸಂಪತ್ತಿನ ಸಮಾನತೆ, ಅಂತರಂಗದ ಅರಿವು, ಸದುವಿನಯದ ಸಿದ್ದಾಂತ, ಏಕದೇವೋಪಾಸನೆ ಮುಂತಾದ ಚಿಂತನೆಗಳಲ್ಲಿ ಲೇಖಕರ ತಾತ್ವಿಕ ಮತ್ತು ತಾರ್ಕಿಕ ಚಿಂತನೆಯನ್ನು ಕಾಣಬಹುದು.
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE