ಹಿರಿಯ ಸಾಹಿತಿ ಶೇಷನಾರಾಯಣ ಅವರ ಕೃತಿ-ಕಾವೇರಿ. ಒಂದು ಚಿಮ್ಮು ಒಂದು ಹೊರಳು ಎಂಬುದು ಈ ಕೃತಿಯ ಉಪಶೀರ್ಷಿಕೆ. ಪೌರಾಣಿಕ, ಚಾರಿತ್ರಿಕ ವಿಷಯ ಮಾತ್ರವಲ್ಲ; ಕಾವೇರಿ ನದಿ ನೀರಿನ ಸಮ್ಮಸ್ಯೆ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ನಡೆದ ಕಲಾಪಗಳ ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ ಕೃತಿ ಇದು. ಕರ್ನಾಟಕ-ತಮಿಳುನಾಡು ಈ ಎರಡೂ ರಾಜ್ಯಗಳ ಬಹುವರ್ಷಗಳ ನೀರಾವರಿಯ ಸಮಸ್ಯೆ ಇಂದಿಗೂ ಕಗ್ಗಂಟಾಗಿ ಉಳಿದಿದೆ. ಇದು ಕೇವಲ ರಾಜ್ಯಗಳ ಆಡಳಿತ ಸಮಸ್ಯೆಯಲ್ಲ; ಅಲ್ಲಿಯ ರೈತರ ಬದುಕಿನ ಪ್ರಶ್ನೆ ಇದು. ಈ ಕುರಿತ ವಿಸ್ತೃತ ಪರಿಚಯ ಒಳಗೊಂಡಿದೆ.
ಪ್ರಸಿದ್ಧ ಕತೆಗಾರ, ಬರಹಗಾರರಾದ ಶೇಷನಾರಾಯಣರು ಹುಟ್ಟಿದ್ದು ಕೊಯಮತ್ತೂರು ಜಿಲ್ಲೆಯ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯದಲ್ಲಿ. ತಂದೆ ಬಿ.ವಿ. ಸುಬ್ರಹ್ಮಣ್ಯ, ತಾಯಿ ಕಾವೇರಮ್ಮ. ಓದಿದ್ದು ನಾಲ್ಕನೆಯ ತರಗತಿವರೆಗೆ. ಶಾಲಾ ಕಾಲೇಜು ಸೇರಿ ಅಲ್ಲಿನ ಜೀವನವನ್ನು ಅನುಭವಿಸಬೇಕಿದ್ದ ದಿನಗಳಲ್ಲಿ ಕೆಲಸಕ್ಕಾಗಿ ಅಲೆದು, ಪಡೆದದ್ದು ಇಡೀ ಭಾರತ ದರ್ಶನ. ತಿರುಪತಿ ತಿಮ್ಮಪ್ಪನ ಫೋಟೋ ಮಾರಾಟ, ಅಷ್ಟೇಕೆ ಗಾರೆ ಕೆಲಸ, ರೈಲುಬಸ್ಸು ನಿಲ್ದಾಣಗಳಲ್ಲಿ ಹೊರೆಹೊತ್ತ ಕೂಲಿಯಾಗಿ, ಇವರಿಗೇ ತಿಳಿಯದೆ ಅದೆಷ್ಟು ಸಾಹಿತಿಗಳ ಹೊರೆ ಹೊತ್ತಿದ್ದಾರೋ ? ಲಾರಿಗಳಿಗೆ ಸರಕು ತುಂಬುವ ಕೂಲಿಯಾಗಿ ಹೀಗೆ ಒಂದೇ, ಎರಡೇ . ಭಾರತವೆಲ್ಲಾ ಸುತ್ತಿ ಗಂಗೆ, ನರ್ಮದೆ, ...
READ MORE