ದಾರಾ ಶಿಖೋ- ಕಲ್ಕತ್ತಾದ ಏಷ್ಯಾಟಿಕ್ ಸೊಸೈಟಿಯು ರಾಜಕುಮಾರ ಮೊಹಮದ್ ದಾರಾಶಿಖೋನ ಮಜಮಾ-ಉಲ್-ಬಹರೈನ್ - ಸಮುದ್ರ ಸಂಗಮ - ಮೂಲ ಪರ್ಷಿಯನ್ ಕೃತಿಯನ್ನುು 1629 ರಲ್ಲಿ ಪ್ರಕಾಶನಗೊಳಿಸಿತು. ಅದೇ ವರ್ಷ ಪ್ರೊ.ಎಂ.ಮಹಫುಜ್-ಉಲ್-ಹಕ್ ಅದರ ಇಂಗ್ಲೀಷ್ ಅನುವಾದವನ್ನು ಪ್ರಕಟಿಸಿದರು. ಭಾರತದ ಬೇರೆ ಬೇೆರೆ ಭಾಗಗಳಲ್ಲಿ ದೊರಕಿದ ಐದು ಪರ್ಷಿಯನ್ ಪಠ್ಯಗಳ ಜೊತೆಗೆ ಒಂದು ಅರಬ್ಬಿ ಪಠ್ಯವನ್ನು ಆಧಾರವಾಗಿಟ್ಟುಕೊಂಡು, ಟಿಪ್ಪಣಿಗಳನ್ನು ಬರೆದು ಸೇರಿಸಿ, ಪ್ರಕಟಿಸಿದರು. ಅದರ ಇಂಗ್ಲೀಷ್ ಅನುವಾದದ ಪಠ್ಯವನ್ನು ಅಗ್ರಹಾರ ಕೃಷ್ಣಮೂರ್ತಿಯವರು ಕನ್ನಡೀಕರಿಸಿದ್ದಾರೆ.
ಈ ಕೃತಿ ಮೊಘಲ್ ಸಾಮ್ರಾಜ್ಯದ ಐದನೇ ದೊರೆ ಶಹಜಾನ್ ನ ಪುತ್ರ ಮೊಹಮದ್ ದಾರಾ ಶಿಖೋ ಜೀವನದ ಕುರಿತದ್ದಾಗಿದೆ.
ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು 1953 ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಕರ್ನಾಟಕದ ಅತ್ಯಂತ ಅಲ್ಪಸಂಖ್ಯಾತ ಜಾತಿಗಳಲ್ಲೊಂದಾದ ಜೆಟ್ಟಿ ಜನಾಂಗದ ಏಕಮಾತ್ರ ಲೇಖಕರು ಎನ್ನಬಹುದು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ...
READ MORE