`ವಿಕ್ರಾಂತ ಭಾರತ' ಎಂಬುದು ವೈಚಾರಿಕ ಬರಹಗಳ ಸಂಕಲನ. ಲೇಖಕ ತಿ.ತಾ. ಶರ್ಮ ಅವರು ಬರೆದಿದ್ದಾರೆ. 1857 ರಿಂದ 1947 ರ ವರೆಗಿನ ಕಾಲಘಟ್ಟದಲ್ಲಿ ಅಬಾಲವೃದ್ಧರಾದಿಯಾಗಿ ಸಾಮಾನ್ಯ ಜನರೂ ಸೇರಿದಂತೆ ಲಕ್ಷಾಂತರ ಜನರು ತಮ್ಮ ತಮ್ಮ ಸಾಮರ್ಥ್ಯಕ್ಕನುಗಣವಾಗಿ ಪರಕೀಯ ಪ್ರಭುತ್ವದ ವಿರುದ್ದ ಸೆಣಸಿದರಲ್ಲದೆ ಅದಕ್ಕೆ ಪ್ರತಿಫಲವಾಗಿ ದೊರೆತ ಛಡಿಯೇಟು, ಜೈಲುವಾಸ, ಕರಿನೀರ ಶಿಕ್ಷೆಗಳನ್ನಷ್ಟೆ ಅಲ್ಲದೆ, ಮರಣದಂಡನೆಯನ್ನೂ ನಗುನಗುತ್ತ ಸ್ವೀಕರಿಸಿದರು. ಅವರ ಅಪ್ರತಿಮ ತ್ಯಾಗ-ಬಲಿದಾನವನ್ನು ಶೌರ್ಯಪರಾಕ್ರಮವನ್ನು ಸ್ವಾತಂತ್ರ್ಯೋತ್ತರ ಪೀಳಿಗೆಗೆ ಪರಿಚಯಿಸಿದ ಕನ್ನಡದ ಪ್ರಮುಖ ಕೃತಿ – ‘ವಿಕ್ರಾಂತ ಭಾರತ’.
ಸ್ವಾತಂತ್ರ್ಯ ಹೋರಾಟವನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತರಬಹುದಾದ ಸಾಧ್ಯತೆಯನ್ನುಈ ಕೃತಿಯು ತೋರಿಸಿಕೊಟ್ಟಿತು. ಈ ಪುಸ್ತಕದಿಂದ ಸ್ಫೂರ್ತಿಪಡೆದು ಕನ್ನಡದ ಹಲವು ಲೇಖಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಕಥೆ, ಕಾವ್ಯ, ಕಾದಂಬರಿ, ನಾಟಕ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಇತಿಹಾಸ ನಾಡಿನ ಮನೆಮನೆಗೂ ತಲಪಿದ್ದು, ಈಗ ಇತಿಹಾಸ. ಇಂಥದ್ದೊಂದು ಮಹತ್ತ್ವ ಕೃತಿಯನ್ನು ಕನ್ನಡದ ಓದುಗರಿಗೆ ಮತ್ತೆ ಲಭ್ಯವಾಗಬೇಕೆನ್ನುವ ಆಶಯದಿಂದ ರಾಷ್ಟ್ರೋತ್ಥಾನ ಸಾಹಿತ್ಯ ಇದನ್ನು ಪುನರ್ ಪ್ರಕಾಶಿಸಿದೆ.
ಸಾಹಿತಿ, ಪತ್ರಕರ್ತ ತಿ.ತಾ. ಶರ್ಮ ಎಂತಲೇ ಪರಿಚಿತರಾಗಿರುವ ತಿರುಮಲೆ ತಾತಾಚಾರ್ಯ ಶರ್ಮ ಅವರು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು. ಇವರು 1897 ಏಪ್ರಿಲ್ 27ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಿಸಿದರು. ತಾಯಿ ಜಾನಕಿಯಮ್ಮ, ತಂದೆ ಶ್ರೀನಿವಾಸ ತಾತಾಚಾರ್ಯ. ಹುಟ್ಟೂರು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದರು. ಸ್ವಾತಂತ್ಯ್ರ ಚಳವಳಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಪತ್ರಕರ್ತರಾಗಿ ಉದ್ಯೋಗ ಆರಂಭಿಸಿದರು. ಭಾರತಿ ಕಾವ್ಯನಾಮದ ಮೂಲಕ ಹೆಸರಾಗಿದ್ದ ತಿರುಮಲೆ ರಾಜಮ್ಮ ಅವರು ಇವರ ಬಾಳಸಂಗಾತಿ. ಶಾಸನಗಳಲ್ಲಿ ಕಂಡುಬರುವ ಕನ್ನಡ ಕವಿಗಳು ಶರ್ಮ ಅವರ ಮೊದಲ ಕೃತಿಯಾಗಿದೆ. ಸಾಹಿತ್ಯ ಕೃಷಿಯಲ್ಲಿಯೂ ...
READ MORE