ಸಂಕಟ ಬಂದಾಗ

Author : ಗಂಗಾರಾಂ ಚಂಡಾಳ

Pages 160

₹ 150.00




Year of Publication: 2018
Published by: ಮಣಿ ಪ್ರಕಾಶನ
Address: # 2, 2ನೇ ಅಡ್ಡರಸ್ತೆ, 3ನೇ ಮಹಡಿ, ಕೋಣೆ ಸಂಖ್ಯೆ :1, ಮುನೇಶ್ವರ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು-560003.

Synopsys

ಸಂಕಟ ಬಂದಾಗ-ಲೇಖಕ, ಚಿಂತಕ ಗಂಗಾರಾಂ ಚಾಂಡಾಳ ಅವರ ಕೃತಿ. ತಪ್ಪುಗ್ರಹಿಕೆ, ವಿಚಾರಗಳ ಮೂಲಕವೇ ಮನುಷ್ಯನು ಸಂಕಟಗಳನ್ನು ತಂದುಕೊಳ್ಳುತ್ತಾನೆ. ಸೋಲು-ಗೆಲುವು ಸಾಮಾನ್ಯ. ಆದರೂ, ತಪ್ಪು-ಗ್ರಹಿಕೆ, ತಪ್ಪು ನಿರ್ಧಾರ, ಸ್ವಂತಿಕೆ ಇಲ್ಲದ ವಿಚಾರಗಳು ಸಹ ಆತನನ್ನು ಸಂಕಷ್ಟದೊಳಗೆ ದೂಡುತ್ತವೆ. ತಮ್ಮಲ್ಲಿ ತಮಗೆ ವಿಶ್ವಾಸ ಇರಿಸಿಕೊಂಡು ಮುನ್ನುಗ್ಗುವವರು ತಮ್ಮ ಭವಿಷ್ಯವನ್ನು ಸಂಕಟಗಳಿಂದ ಮುಕ್ತವಾಗಿಸಿಕೊಳ್ಳುತ್ತಾರೆ. ಸುಖ-ದುಃಖ ವನ್ನು ಬದುಕಿನಲ್ಲಿ ಸಮಾನವಾಗಿ ಸ್ವೀಕರಿಸಬೇಕು. ಒಂದು ಒಪ್ಪಿ ಮತ್ತೊಂದನ್ನು ತಿರಸ್ಕರಿಸುವಂತಿಲ್ಲ. ಇಂತಹ ಮನೋಭಾವವೇ ಸಂಕಷ್ಟಗಳಿಗೆ ಆಹ್ವಾನ ನೀಡುತ್ತದೆ. ಸಂಕಟಗಳು ನಮ್ಮ ಆಹ್ವಾನದ ಮೇರೆಗೆ ಬರುತ್ತವೆ ಎಂಬುದೇ ಬಹಳ ಜನಕ್ಕೆ ತಿಳಿಯದು. ತಮ್ಮ ಸಂಕಟಗಳಿಗೆ ದೇವರು-ದೆವ್ವ ಇಂತಹ ಅಲೌಕಿಕ ಶಕ್ತಿಗಳು ಕಾರಣವಲ್ಲ. ಇಂತಹ ಸಂಗತಿ-ವಿದ್ಯಮಾನಗಳನ್ನು ಒಳಗೊಂಡ ಲೇಖನಗಳ ಸಂಗ್ರಹ ಕೃತಿ ಇದು.

About the Author

ಗಂಗಾರಾಂ ಚಂಡಾಳ

ಲೇಖಕ ಗಂಗಾರಾಂ ಚಂಡಾಳ ಅವರು ಕೋಲಾರ ಜಿಲ್ಲೆಯ ಯಡಹಳ್ಳಿ (ಜನನ: 18-06-1961) ಗ್ರಾಮದವರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ.  ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ಯು.ಆರ್.ಪಿ ವತಿಯಿಂದ (2005) ಎಂ.ಟೆಕ್ ವ್ಯಾಸಂಗ ಪೂರೈಸಿದರು. ಕನ್ನಡ, ತೆಲುಗು, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರು.  ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ ಸಂಘಟನೆಯಿಂದ ಸಮಾಜ ಸೇವೆಯಲ್ಲಿ ನಿರತರು. ಗೋಕಾಕ್ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ., ಸಮ್ಮೇಳನ, ಉತ್ಸವಗಳು ...

READ MORE

Related Books