ಪೋಷಕತ್ವ ಮತ್ತದರ ತತ್ವ

Author : ಎಚ್.ಎಸ್. ದರ್ಶನ್‌ (ದರುಶನ)

Pages 68

₹ 80.00




Year of Publication: 2021
Published by: ಅಪಾರ ಪ್ರಕಾಶನ
Address: # 364, ಎಚ್.ಎಸ್. ದರ್ಶನ್, ಹೊಸಕೊಡಿಗೆ, ತೆಂಗಿನ ಕೊಪ್ಪ ಅಂಚೆ: ತೀರ್ಥಹಳ್ಳಿ-577414

Synopsys

ಲೇಖಕ ದರುಶನ (ಎಚ್.ಎಸ್. ದರ್ಶನ) ಅವರ ಬರಹಗಳ ಕೃತಿ-ಪೋಷಕತ್ವ ಮತ್ತದರ ತತ್ವ. ಜನಸಂಖ್ಯೆ ಸ್ಫೋಟದಿಂದ ಆಗುವ ಅನಾಹುತಗಳನ್ನುಕೇಂದ್ರವಾಗಿಸಿಕೊಂಡು ಬರೆದ ಬರಹಗಳು ಇಲ್ಲಿವೆ. ಮಕ್ಕಳಿಗೆ ತಂದೆಯಾಗುವುದು ಮಾತ್ರ ಪೋಷಕರ ಹೊಣೆಗಾರಿಕೆ ಎಂಬ ಭಾವನೆ ಬಹುಜನರಲ್ಲಿದೆ. ಆದರೆ, ಅವರನ್ನು ಬೆಳೆಸುವ, ಆರೈಕೆ ಮಾಡುವ ಹೊಣೆಗಾರಿಕೆ ಇದೆ ಎಂಬುದನ್ನು ಬಹುತೇಕ ಪೋಷಕರು ಮರೆಯುತ್ತಾರೆ. ಇದು ಪೋಷಕರು ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ ಮಾತ್ರವಲ್ಲ; ಜನಸಂಖ್ಯೆ ಸ್ಫೋಟದ ಸಮಸ್ಯೆಗೂ ಕಾರಣವಾಗಿ, ಇಡೀ ದೇಶದ ಸಮಸ್ಯೆಗೂ ಮೂಲವಾಗುತ್ತದೆ ಎಂಬ ಅಂಶವನ್ನು ಕೃತಿಯಲ್ಲಿ ಗಂಭೀರವಾgi ಪರಿಗಣಿಸಲಾಗಿದೆ. ‘ಈ ಪುಸ್ತಕ ಓದಿದವರು ಉತ್ತಮ ಪೋಷಕರಾಗುವ ಧ್ಯೇಯ ತೊಡುತ್ತಾರೆ. ಇಲ್ಲವಾದರೆ, ಕಾಂಡೋಮ್ ತೊಡುತ್ತಾರೆ' ಎಂಬ ಮಾತು ಕೃತಿಯಲ್ಲಿ ಉಲ್ಲೇಖಿಸಿದ್ದು, ಪೋಷಕರ ಹೊಣೆಗಾರಿಕೆಯನ್ನು ಎಚ್ಚರಿಸುತ್ತದೆ ಮತ್ತು ತಪ್ಪಿದರೆ, ವ್ಯಂಗ್ಯವಾಗಿಯೂ ವಿಡಂಬಿಸುತ್ತದೆ. ಈ ಸಾಲು ಕೃತಿಯ ಒಟ್ಟು ಧ್ವನಿಯಾಗಿದೆ. 

About the Author

ಎಚ್.ಎಸ್. ದರ್ಶನ್‌ (ದರುಶನ)
(01 March 1990)

ದರುಶನ ಕಾವ್ಯನಾಮದ ದರ್ಶನ್.ಹೆಚ್. ಎಸ್   ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸಕೊಡಿಗೆ ಗ್ರಾಮದವರು. ‘ನಿಟ್ಟೆ’ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವೀಧರರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.  ಕೃತಿಗಳು: ತಾಯಿಗರ್ಭದಿಂದ ಭೂಗರ್ಭದವರೆಗೂ (ಕವನಗಳ ಸಂಕಲನ-2017)  ...

READ MORE

Conversation

Related Books