ಕನ್ನಡದ ತ್ರಿಪದಿಗಳ ಖ್ಯಾತಿಯ ಸರ್ವಜ್ಞನ ಬೆಡಗಿನ ವಚನಗಳನ್ನು ಸಂಗ್ರಹಿಸಿ, ಲೇಖಕ ಶಿವಕವಿ ಹಿರೇಮಠ ಜೋಗೂರ ಅವರು, ವಚನಗಳ ಅರ್ಥ -ವ್ಯಾಖ್ಯಾನಗಳನ್ನು ವಿಶ್ಲೇಷಿಸಿದ ಕೃತಿ ಇದು. ಪ್ರಸ್ತುತ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಕಟ್ಟಿಕೊಡಲಾಗಿದೆ. ಸರ್ವಜ್ಞನ 101 ವಚನಗಳನ್ನು ವ್ಯಾಖ್ಯಾನಿಸಿದ್ದು, ಮನುಷ್ಯನ ಮನೋದೈಹಿಕ ವಿಕಾಸಕ್ಕೆ ಈ ವಚನಗಳ ತತ್ವ ಪಾಲನೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ.
ಲೇಖಕ ಶಿವಕವಿ ಹಿರೇಮಠ ಜೋಗುರ ಅವರು ಕಲಬುರಗಿ ಜಿಲ್ಲೆಯ ಜೋಗೂರ ಹಿರೇಮಠ ಸಂಸ್ಥಾನದ ವೀರಮಾಹೇಶ್ವರ ವಂಶಜರು. ತಂದೆ ಚಿತ್ರಶೇಖರಯ್ಯ ತಾಯಿ ಗಂಗಮ್ಮ .ಇವರ ಮೂಲ ಹೆಸರು ಶಿವಪೂಜಯ್ಯ. ಆದರೆ, ಕಾವ್ಯನಾಮ ಶಿವಕವಿ . ಪುರಾಣ ಪ್ರವಚನದೊಂದಿಗೆ ಸಾಹಿತ್ಯದ ಸೇವೆಯೂ ಇವರನ್ನು ಆಕರ್ಷಿಸಿದೆ. ತಮ್ಮದೇ ಆದ ಜ್ಞಾನಗಂಗಾ ಪ್ರಕಾಶನ ಸ್ಥಾಪಿಸಿದ್ದಾರೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿಯ ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದಿದ್ದು 10ನೇ ತರಗತಿಯವರೆಗೆ ಮಾತ್ರ. 9ನೇ ವಯಸ್ಸಿನಲ್ಲೇ ನಾಟಕರಂಗದತ್ತ ಆಕರ್ಷಿತರಾಗಿ, ಮುಂದೆ 1977ರಲ್ಲಿ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ನಾಟ್ಯ ಸಂಘ ಸ್ಥಾಪಿಸಿದರು. 1982ರಲ್ಲಿ, ಗಂವಾರದಲ್ಲಿ ಶ್ರೀ ವಿಶ್ವಾರಾಧ್ಯ ನಾಟ್ಯ ಸಂಘ ಸ್ಥಾಪಿಸಿದರು. ...
READ MORE