ಜ್ಞಾನ ಸಿಂಚನ. ಈ ಕೃತಿಯು ಶಿಷ್ಠ ಹಾಗೂ ಭಾಷಾ ವಿಷಯಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹವಾಗಿದೆ. ಡಾ. ನಾಗಪ್ಪ ಟಿ. ಗೋಗಿ ಪ್ರಧಾನ ಸಂಪಾದಕರು ಹಾಗೂ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಸಂಪಾದಕರು. ಕನ್ನಡ ಸಾಹಿತ್ಯ ತನ್ನ ಹಿರಿಮೆ ಗರಿಮೆಯಿಂದ ಜಗತ್ತಿನ ಜನರ ಕಣ್ಣು ಸೆಳೆದಿದೆ. ಮನವನ್ನು ತಣಿಸಿದೆ.ಹೊಸಗನ್ನಡದ ಸಂದರ್ಭದಲ್ಲಿ ಕಾವ್ಯ,ಕತೆ,ಕಾದಂಬರಿ, ನಾಟಕ, ಮೊದಲಾದ ಶಿಷ್ಟ ಸಾಹಿತ್ಯ ಪ್ರಕಾರಗಳು ಮತ್ತು ನೇಕಾರಿಕೆ, ಹಬ್ಬ, ಕನ್ನಡ ಶಾಸ್ತ್ರೀಯ ಭಾಷೆ, ದಲಿತರ ಚಳವಳಿಗಳು ಮತ್ತು ವಚನ ಸಾಹಿತ್ಯ ಹಾಗೂ ಕೀರ್ತನೆಗಳ ಪರಿಕಲ್ಪನೆಯ ಜ್ಞಾನ ವಿಸ್ತರಣೆ ಭಾಗವಾಗಿಯೇ ಇಲ್ಲಿ ಸಂಚಯ ಗೊಂಡಿವೆ. ಈ ಎಲ್ಲಾ ಲೇಖನಗಳು ಸಮಕಾಲೀನ ಸಂದರ್ಭಕ್ಕೆ ಒರೆಗೆ ಹಚ್ಚಿ ವಿಮರ್ಶಿಸುವ ಕ್ರಮ ಅಧ್ಯಯನಕ್ಕೆ ಯೋಗ್ಯವಾಗಿವೆ. ನಾಡಿನಾದ್ಯಂತ ಇರುವ ಸಂಶೋಧನಾಸಕ್ತರ ಗಮನಸೆಳೆದಿವೆ.
ಸಾಹಿತಿ ಡಿ. ನಾರಾಯಣ ರೋಳೆಕರ್ ಅವರು ಕೃತಿಗೆ ಬೆನ್ನುಡಿ ಬರೆದು ‘ಜಾಗತೀಕರಣದಿಂದ ಗುಡಿ ಕೈಗಾರಿಕೆಗಳು ವಿಶೇಷವಾಗಿ ನೇಕಾರಿಕೆಯ ಮೇಲೆ ಬೀರಿದ ದುಷ್ಟರಿಣಾಮಗಳ ಕುರಿತ ಜಿಜ್ಞಾಸೆಯು ಈ ಬರಹಗಳ ಜೀವಾಳವಾಗಿವೆ. ದಲಿತ ಚಳವಳಿ, ವಚನ ಸಾಹಿತ್ಯ ಹುಟ್ಟು, ಚಳವಳಿಯಾಗಿ ಬೆಳೆದ ಪರಿ ಅನನ್ಯವಾಗಿರುವುದನ್ನು ಬಿಂಬಿಸುತ್ತವೆ. ಇಲ್ಲಿಯ ಬರಹಗಾರರು ಸಂಶೋಧನಾ ವಿದ್ಯಾರ್ಥಿಗಳೇ ಆಗಿದ್ದರಿಂದ, ಪ್ರತಿ ಬರಹಕ್ಕೂ ಸಂಶೋಧನಾ ದೃಷ್ಟಿ ಇದೆ. ಹೀಗಾಗಿ, ಬರಹಗಳು ಮೌಲಿಕ ಹಾಗೂ ಸಂಶೋಧನಾತ್ಮಕವಾಗಿವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.