‘ಹಳ್ಳಿಯ ಆತ್ಮಕಥೆ’ ಲೇಖಕ ನರೇಂದ್ರ ರೈ ದೇರ್ಲ ಅವರ ಲೇಖನಗಳ ಸಂಕಲನ. ಕೋವಿಡ್ ಸಂಕಷ್ಟ ಸಂದರ್ಭಕ್ಕೆ ಸೃಜನಾತ್ಮಕವಾಗಿ ಸಡ್ಡು ಹೊಡೆಯುವಂತೆ, ಹದಿನೆಂಟು ಪ್ರಬಂಧಗಳ ಸಂಚಯ ಹಳ್ಳಿಯ ಆತ್ಮಕಥೆ. ವೃತ್ತಿಯಿಂದ ಪ್ರಾಧ್ಯಾಪಕರೂ ಪ್ರವೃತ್ತಿಯಿಂದ ಸಾಹಿತಿ- ಪತ್ರಕರ್ತ- ಸಂಪಾದಕ- ಅನುವಾದಕ- ಕವಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನರೇಂದ್ರ ರೈ ದೇರ್ಲ ಅವರ ಈ ಕೃತಿ ವಿಶೇಷವಾಗಿದೆ.
ಜನಪರ ಅಂಕಣಕಾರರಾಗಿ ರಾಜ್ಯಾದ್ಯಂತ ಮನ್ನಣೆ ಪಡೆದಿರುವ ನರೇಂದ್ರ ರೈ ದೇರ್ಲ ಅವರು ಕೊರೋನದಂತ ಸಂಕಷ್ಟದ ಕಾಲದಲ್ಲಿ ಹಲವು ವಿಭಿನ್ನ ಲೇಖನಗಳನ್ನು ರಚಿಸಿದ್ದಾರೆ. ಹಳ್ಳಿಯ ಆತ್ಮಕಥೆ ಎಂಬ ಶೀರ್ಷಿಕೆ ತುಂಬಾ ಔಚಿತ್ಯಪೂರ್ಣವಾಗಿದೆ. ವೃಷ್ಟಿ ಮತ್ತು ಸಮಷ್ಟಿ ಎಂಬ ಎರಡೂ ನೆಲೆಗಳಲ್ಲಿ ಪರಿಭಾವಿಸಬೇಕಾದ ಗ್ರಂಥವಿದು. ಹಳ್ಳಿ ಮತ್ತು ದೇರ್ಲರು ಅಭಿನ್ನ ಎಂಬ ನಿಜ ಅರಿವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಹಳ್ಳಿಯ ಆತ್ಮಕಥೆ ಪುಸ್ತಕದ ಕುರಿತು ಲೇಖಕ ನರೇಂದ್ರ ರೈ ದೇರ್ಲ ಅವರ ಮಾತು
©2024 Book Brahma Private Limited.