‘ದೀಪದ ಕೆಳಗೆ’ ಅಮೃತ ಸೋಮೇಶ್ವರ ಅವರ ಲೇಖನಗಳ ಸಂಗ್ರಹವಾಗಿದೆ. ಜನತೆಗೆ ವಿಚಾರ ಪ್ರಚೋದನೆ ಉಂಟುಮಾಡುವಂಥ ಬಹಳಷ್ಟು ಅಂಶಗಳು ಈ ಲೇಖನಗಳಲ್ಲಿವೆ. ಮತೀಯ - ರಾಜಕೀಯ - ಧಾರ್ಮಿಕ ಈ ಮೂರೂ ನೆಲೆಗಳಲ್ಲಿ ಇಲ್ಲಿನ ಬರಹಗಳು ಜನಸಾಮಾನ್ಯರನ್ನು ಎಚ್ಚರಿಸುತ್ತವೆ.
ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕಥೆಗಾರರಾದ ಅಮೃತ ಸೋಮೇಶ್ವರರವರು ಹುಟ್ಟಿದ್ದು 1953 ಸೆಪ್ಟಂಬರ್ 27 ರಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ಸಾಹಿತ್ಯ ರಚನೆಗೆ ತೊಡಗಿದ್ದು ತುಳು ಹಾಗೂ ಕನ್ನಡದಲ್ಲಿ. ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಮುಗಿಸಿದ ಅವರು ಪ್ರೌಢ ಶಿಕ್ಷಣವನ್ನ ಆನಂದಾಶ್ರಮದಲ್ಲಿ ಮಾಡಿದ್ದಾರೆ. ಆನಂತರ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪಡೆದು, ಮದರಾಸು ವಿಶ್ವವಿದ್ಯಾಲಯದಿಂದ ...
READ MOREಹೊಸತು- ನವೆಂಬರ್ -2003
ಇವು ಸಮಯೋಚಿತವಾಗಿ ಬರೆಯಲಾದ ಅಮೃತ ಸೋಮೇಶ್ವರ ಅವರ ವೈಚಾರಿಕ ನೆಲೆಯ ಕಿರುಬರಹಗಳು: ಅನೇಕ ವಿಷಯಗಳ ಮೇಲೆ ಸಂದರ್ಭಾನುಸಾರ ವಿವಿಧ ಪತ್ರಿಕೆಗಳಿಗೆ ಬರೆದ ಉತ್ತಮ ಅಭಿರುಚಿಯ ಚಿಕ್ಕ ಚೊಕ್ಕ ಮಾತುಗಳು. ಇಂದಿನ ಜನತೆಗೆ ಅತೀ ಅವಶ್ಯವಾದವು ಗಳೆಂದು ಹೇಳಲಡ್ಡಿಯಿಲ್ಲ, ಜನತೆಗೆ ವಿಚಾರ ಪ್ರಚೋದನೆ ಉಂಟುಮಾಡುವಂಥ ಬಹಳಷ್ಟು ಅಂಶಗಳು ಈ ಲೇಖನಗಳಲ್ಲಿವೆ. ಮತೀಯ - ರಾಜಕೀಯ - ಧಾರ್ಮಿಕ ಈ ಮೂರೂ ನೆಲೆಗಳಲ್ಲಿ ಇಲ್ಲಿನ ಬರಹಗಳು ಜನಸಾಮಾನ್ಯರನ್ನು ಎಚ್ಚರಿಸುತ್ತವೆ.