‘ನಾವು ಮತ್ತು ಪ್ರಜ್ಞೆ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ವೈಚಾರಿಕ ಲೇಖನಗಳ ಸಂಕಲನ. ಪ್ರಜ್ಞೆ ಎಂದರೆ ಅರಿಯುವ ಶಕ್ತಿ. ಹಿಂದೆ ಆದುದನ್ನು ನೆನೆಯುವುದು ಸ್ಮೃತಿ, ಈಗ ನಡೆಯುವುದನ್ನು ಪರಿಶೀಲಿಸುವುದು ಬುದ್ಧಿ ಮುಂದೆ ಆಗುವುದನ್ನು ಊಹಿಸುವುದೂ ಮತಿ. ನಮ್ಮವರ ಮತದಂತೆ ಈ ತ್ರಿಕಾಲದ ವಿಷಯವನ್ನು ಪ್ರಜ್ಞೆ ಒಳಗೊಳ್ಳುತ್ತದೆ. ದಿ.ತೀ.ನಂ. ಶ್ರೀಕಂಠಯ್ಯನವರ ವಿಶ್ಲೇಷಣೆಯನ್ನು ಒಂದು ನೆಲೆಗಟ್ಟಾಗಿ ಉಪಯೋಗಿಸಿಕೊಂಡು, ಆಗುಂಬೆ ಎಸ್. ನಟರಾಜ್, ಭಾರತೀಯರಲ್ಲಿ ಯಾವ ಪ್ರಕಾರದಲ್ಲಿ ಪ್ರಜ್ಞೆಯನ್ನು ಹೊಂದಿರುತ್ತಾರೆ ಎಂಬ ವಿಷಯದಲ್ಲಿ ತಮ್ಮ ವಾದ, ಅನಿಸಿಕೆ ಮತ್ತು ವಿಶ್ಲೇಷಣೆಯನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಲೇಖಕ ನಟರಾಜ್, 1939 ನವೆಂಬರ್ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...
READ MORE