ಲೇಖಕ ಡಾ. ರಾಜಾರಾಮ ಹೆಗಡೆ ಅವರ ಕೃತಿ-ದಾರಿ ತಪ್ಪಿದ ಸಂಸ್ಕೃತಿ ಚಿಂತನೆ. ಸಂಸ್ಕೃತಿಯು, ಪ್ರಾಣಿಯನ್ನು ಮನುಷ್ಯನಿಂದ ಬೇರೆಯಾಗಿರಿಸುತ್ತದೆ. ಪ್ರಾಣಿಗಳಿಗೆ ಪ್ರಕೃತಿ ನಿಯಮಗಳೇ ಅಗತ್ಯ ಹಾಗೂ ಅನಿವಾರ್ಯ. ಆದರೆ, ಪ್ರಕೃತಿಯ ಕೂಸು ಎಂದು ಕರೆಯಲಾಗುವ ಮನುಷ್ಯನಿಗೆ ಪ್ರಕೃತಿಯ ಬಹುತೇಕ ನಿಯಮಗಳು ಅನ್ವಯವಾಗುವುದಿಲ್ಲ. ಏಕೆಂದರೆ, ಅವನಿಗೆ ಸಂಸ್ಕೃತಿ ಮುಖ್ಯ. ಸಾಂಸ್ಕೃತಿಕ ನಿಯಮ ಪಾಲಿಸದಿದ್ದಲ್ಲಿ, ಮನುಷ್ಯನಿಗೂ, ಪ್ರಾಣಿಗೂ ವ್ಯತ್ಯಾಸ ಇಲ್ಲದಂತಾಗುತ್ತದೆ. ಈ ವಿಷಯಗಳ ಹಿನ್ನೆಲೆಯಲ್ಲಿ ರೂಪುಗೊಂಡ ಚಿಂತನಾಕ್ರಮವನ್ನು ಇಲ್ಲಿ ಕಾಣಬಹುದು.
ಡಾ. ರಾಜಾರಾಮ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐನಕೈನವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೊನ್ನೆಬಾಗ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಪ್ರಾಕ್ತನಶಾಸ್ತ್ರ ಹಾಗೂ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ವಿಶೇಷ ಅಧ್ಯಯನವನ್ನಾಗಿ ಆಯ್ಕೆಮಾಡಿಕೊಂಡು ತಮ್ಮ ಸ್ನಾತಕೋತ್ತರ ಪದವಿಯನ್ನು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪಡೆದಿರುತ್ತಾರೆ. 1979ರಲ್ಲಿ ‘ಶುಂಗ ಕಾಲದ ಕಲೆ : ಸಾಂಸ್ಕರತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟೊರೇಟ್ ಪದವಿಯನ್ನು ಪಡೆದರು. ಹಂಪಿ, ಇನಾಂಗಾವ್ ಹಾಗೂ ಸನ್ನತಿ ನೆಲೆಗಳ ಉತ್ಖನನದಲ್ಲಿ ಭಾಗವಹಿಸಿದ್ದಾರೆ. 1988ರಿಂದ 2019ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ...
READ MORE