ಪಾ.ವೆಂ. ಆಚಾರ್ಯರು ಬರೆದ ಲೇಖನಗಳ ಕೃತಿ-ಬ್ರಾಹ್ಮಣರೇನು ಮಾಡಬೇಕು?. ಪಾ.ವೆಂ. ಆಚಾರ್ಯರ ಸಮಗ್ರ ಸಾಹಿತ್ಯ ಸಂಪುಟ ಸರಣಿಯಡಿ ಶ್ರೀನಿವಾಸ ಹಾವನೂರು ಅವರು ಪ್ರಧಾನವಾಗಿ ಸಂಪಾದಿಸಿದ್ದಾರೆ. ಸಾಮಾಜಿಕ ಸಮಸ್ಯೆಯಾಗಿಯೂ ಪರಿವರ್ತನೆಯಾಗಿರುವ ಬ್ರಾಹ್ಮಣರ ಸಮಸ್ಯೆಗಳ ಬಗ್ಗೆ ಪಾ.ವೆಂ. ಅವರ ವಿಸ್ತೃತ ಹಾಗೂ ಗಂಭೀರ ಚಿಂತನೆ ಇಲ್ಲಿ ಮಡುಗಟ್ಟಿದೆ.
ಬ್ರಾಹ್ಮಣರು ಪ್ರಗತಿ ವಿರೋಧಿಗಳು, ವಿದ್ಯೆಯನ್ನು ತಮ್ಮಲ್ಲೇ ಇಟ್ಟುಕೊಂಡು ಉಳಿದ ಜಾತಿಯವರನ್ನು ಕತ್ತಲಲ್ಲಿಟ್ಟವರು ಎಂಬ ಆರೋಪಗಳನ್ನು ಲೇಖಕರು ತಳ್ಳಿ ಹಾಕಿದ್ದು, ಬ್ರಾಹ್ಮಣ ಸಮುದಾಯವೂ ಮಾಡಿದ ಹಾಗೂ ಮಾಡುತ್ತಿರುವ ತಪ್ಪುಗಳನ್ನು ಸಹ ಲೇಖಕರು ಗುರುತಿಸಿ, ತಿದ್ದಿಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದೂ ಎಚ್ಚರಿಸಿದ್ದಾರೆ. ತಮ್ಮ ವಿಚಾರಗಳನ್ನು ವಿವಿಧ ನೆಲೆಯಲ್ಲಿ ವಿಭಾಗಿಸಿದ್ದು, ಬ್ಯಾಹ್ಮಣ್ಯವೆಂದರೇನು? ಗೊಡ್ಡು ಬ್ರಾಹ್ಮಣ್ಯ ಮತ್ತು ಧೂರ್ತ ಚಾರ್ವಾಕ ಮತ ಹಾಗೂ ಹಿಂದಿಲ್ಲ ಸ್ವಾಮಿ ಮುಂದಿಲ್ಲ -ಈ ಲೇಖನಗಳಿಗೆ ಪ್ರತಿಕ್ರಿಯೆಗಳು ಇವೆ. 2ನೇ ವಿಭಾಗದಲ್ಲಿ , ಧಾರ್ಮಿಕ ನೆಲೆಯಲ್ಲಿ ಧರ್ಮ ಎಂದರೇನು? ಧರ್ಮ ಸಂಕಟ, ಶಾಸ್ತ್ರ ಪಾಲನೆ ಏಕೆ? ಮಠಗಳು ಅವು ಏನು ಮಾಡಬಲ್ಲವು? 3ನೇ ವಿಭಾಗದಲ್ಲಿ ಚಿಂತನಾಪರತೆ ಇದೆ; ಜೀವನಕ್ಕೆ ಅರ್ಥವುಂಟೆ?, ಮಾನವ ಪ್ರವೃತ್ತಿ ಮತ್ತು ಮೌಲ್ಯಗಳು, ಬೇಕು ಪಾಪ ಪ್ರಜ್ಞೆ ಇತ್ಯಾದಿ, 4ನೇ ಭಾಗದಲ್ಲಿ, ವೈಚಾರಿಕ ನೋಟವಿದೆ; ಪ್ರಾಮಾಣಿಕತೆಯಲ್ಲಿ ಸುಖವಿದೆ, ಅಹಿಂಸೆ-ಶಾಖಾಹಾರಿ ಇತ್ಯಾದಿ, ಆಜ್ಞಾಪಾಲನೆ: ಮನುಷ್ಯನ ಸ್ವಾಭಾವವೇ? ಶೈಕ್ಷಣಿಕ ವಿಭಾಗದಲ್ಲಿ ಶಿಕ್ಷಣ ಮತ್ತು ಮೌಲ್ಯಗಳು, ಸಂಸ್ಕೃತ ಶಿಕ್ಷಣ: ಹೊಸ ರೀತಿ ಬೇಕು, ನಮ್ಮ ಮಕ್ಕಳಿಗೆ ನಾವು ಹೀಗೆ ಬಿಡಬೇಕೆ? ಇತ್ಯಾದಿ ವಿದ್ವತ್ ಪೂರ್ಣವಾದ ಲೇಖನಗಳ ಸಂಕಲನ ಇದು.
©2024 Book Brahma Private Limited.