‘ಪರಿಣಯ ಪ್ರಬಂಧ' ಹಿಂದೂ ವೈದಿಕ ವಿವಾಹಕರ್ಮ ಕ್ರಮವನ್ನು ವಿವರಿಸುವ ಕಿರುಕೃತಿ. ವಿವಾಹಪದ್ಧತಿ ಬಹು ಪ್ರಾಚೀನ ಕಾಲದಿಂದ ನಡೆದುಬಂದ ಒಂದು ಸಾಮಾಜಿಕ ಕ್ರಿಯೆ, ಇದಕ್ಕೆ ವೇದಮಂತ್ರಗಳ ಆಧಾರ, ಗಂಡು-ಹೆಣ್ಣುಗಳ ಸಂಸರ್ಗದ ಉದ್ದೇಶವೇನು? ಅದು ಬರಿಯ ಕಾಮ- ಭೋಗಗಳ ತೃಪ್ತಿಯೇ? ಅಥವಾ ಸಮಾಜ-ದೇಶದ ಉದ್ದಾರವೇ? ಎಂಬ ವಿಷಯಗಳ ಬಗ್ಗೆ ಈ ಕೃತಿ ಚರ್ಚಿಸುತ್ತದೆ.
ಆರ್. ಶಂಕರನಾರಾಯಣ್ ಅವರು ಹುಟ್ಟೂರು ಆನೇಕಲ್ ತಾಲೂಕು ರಾಚಮಾನಹಳ್ಳಿ. 1979ರಲ್ಲಿ ಕನ್ನಡ ಎಂ.ಎ. ಪದವಿ ಪೂರೈಕೆ. ದೂರವಾಣಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಣೆ. ಸಂಗೀತ ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಗೆ ಅವಿರತವಾದ ಸೇವೆ ಸಲ್ಲಿಸುವುದು ಅವರ ಬದುಕಿನ ಗುರಿಯಾಗಿತ್ತು. ಸಂಗೀತ ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಗೆ ಸಂಬಂಧಿಸಿದಂತೆ ‘ಆಧಿತ್ಯ ಹೃದಯಂ, ಶ್ರೀ ಶಂಕರ ಬೋಧಾಮೃತ, ಪರಿಣಯ ಪ್ರಬಂಧ, ಚಿತ್ರಪಲ್ಲವ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE