ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ

Author : ಮುಜಾಫರ್ ಅಸ್ಸಾದಿ

Pages 264

₹ 300.00




Year of Publication: 2021
Published by: ಬಹುರೂಪಿ ಪ್ರಕಾಶನ
Address: # 111-ಎ, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 07019182729

Synopsys

ಡಾ. ಮುಜಾಫರ ಅಸ್ಸಾದಿ ಅವರ ಕೃತಿ-ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ. ಅಸ್ಮಿತೆ, ವಸಾಹತುಶಾಹಿ ಮತ್ತು ಮೀಸಲಾತಿ ಎಂಬುದು ಈ ಕೃತಿಯ ಉಪಶೀರ್ಷಿಕೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಭಾರತದ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಇಲ್ಲಿರುವ ಜಾತಿ ವ್ಯವಸ್ಥೆ ಹಿನ್ನೆಲೆಯಲ್ಲಿ ಲೇಕಕರು ವಿಶ್ಲೇಷಿಸಿದ್ದಾರೆ. ಅಲ್ಪಸಂಖ್ಯಾತರು ಮಾತ್ರವಲ್ಲ; ಜಾತಿ ವ್ಯವಸ್ಥೆ ಇರುವವರೆಗೂ ಮೇಲ್ವರ್ಗದ ಜನತೆ ಹೊರತುಪಡಿಸಿ, ಉಳಿದ ಎಲ್ಲ ಜಾತಿಯ ಜನತೆ ಒಂದಿಲ್ಲೊಂದು ಮಾನಸಿಕ ಗುಲಾಮಗಿರಿಯನ್ನು ಅನುಭವಿಸುತ್ತಲೇ ಇರುತ್ತಾರೆ ಎಂಬುದನ್ನು ವಿಶ್ಲೇಷಿಸಲಾಗಿದೆ.

About the Author

ಮುಜಾಫರ್ ಅಸ್ಸಾದಿ

ಡಾ. ಮುಜಾಫರ್ ಅಸ್ಸಾದಿ ಅವರು ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜೆಎನ್ ಯು ನಿಂದ ಎಂ.ಫಿಲ್ ಹಾಗೂ ಪಿಎಚ್ ಡಿ ನಂತರ ಶಿಕಾಗೋ ವಿ.ವಿ.ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟೊರಲ್ ಪದವೀಧರರು. ಈವರೆಗೆ 11 ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ, ವರದಿ ನೀಡಿದ್ದಾರೆ. ಸದ್ಯ, ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರು. ಕೃತಿಗಳು: ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ...

READ MORE

Awards & Recognitions

Reviews

‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಕೃತಿಯ ವಿಮರ್ಶೆ

ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ: ವಾಸ್ತವಕ್ಕೆ ಮುಖಾಮುಖಿ

 ಮುಜಾಫರ್ ಅಸಾದಿ ಅವರ 'ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ' ಕೃತಿ ಭಾರತೀಯ ಮುಸ್ಲಿಮರ ಕುರಿತಂತೆ ಕೆಲವರಲ್ಲಿರುವ ಜಡ್ಜ್‌ಮೆಂಟಲ್‌ ಮನಸ್ಥಿತಿಯನ್ನು ಮುಖಕ್ಕೆ ಒಡೆದಂತೆ ಪ್ರಶ್ನಿಸುತ್ತದೆ. ಮುಸ್ಲಿಮರ ಕುರಿತಂತೆ ಮುಸ್ಲಿಮರಿಗೆ ಅರಿವಿಲ್ಲದ ಹಲವು ವಾಸ್ತವಗಳನ್ನು ಈ ಕೃತಿ ತೆರೆದಿಡುತ್ತದೆ. 'ಅಲ್ಪಸಂಖ್ಯಾತರ ತುಷೀಕರಣ ಎನ್ನುವ ಹುಸಿಯ ನಡುವೆ ಮುಸ್ಲಿಮ್ ಸಮುದಾಯ ಹೇಗೆ ಇನ್ನೂ ತನಗೇ ತಿಳಿಯದಂತೆ ಜಾತಿ ವ್ಯವಸ್ಥೆಯ ಒಳಸುಳಿಗೆ ಸಿಲುಕಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ ಎನ್ನುವ ಅಂಶವನ್ನು ಕೃತಿ ಬಹಿರಂಗಪಡಿಸುತ್ತದೆ.

'ಈ ಕೃತಿಯು ಅಲ್ಪಸಂಖ್ಯಾತರ ಒಳ ಪ್ರಭೇದಗಳ ಕುರಿತಾದ ಇರಿಸಿಕೊಂಡರೂ ಅಲ್ಲಿಯೇ ನಿಲ್ಲದೆ, ಅದಕ್ಕೆ ಅಂಟಿಕೊಂಡ ಇತರ ಅನೇಕ ವಿಷಯಗಳನ್ನು ಮುಂದಿಡುತ್ತಿದೆ. ಅದು ನಮ್ಮ ಪ್ರಚಲಿತದಲ್ಲಿರುವ ಅನೇಕ ಮಿಥೈಗಳನ್ನು ಒಡೆಯುತ್ತದೆ. ಮಸಾಹತು ಕಾಲಘಟ್ಟದಲ್ಲಿ ಪ್ರಭುತ್ವವು ಕಟ್ಟಿಕೊಟ್ಟ ಚರಿತ್ರೆ ಮತ್ತು ವಾಸ್ತವಗಳನ್ನು ಪ್ರಸ್ತುತ ಪುಸ್ತಕವು ದಿಟ್ಟವಾಗಿ ಆಧಾರ ಸಮೇತ ಪರೀಕ್ಷಿಸುತ್ತದೆ. ಧರ್ಮ, ಜಾತಿ, ಜನಗಣತಿ, ಮೀಸಲಾತಿ, ರಾಜಕಾರಣ, ಸಂಶೋಧನೆ ಮತ್ತು ಕೆಲವು ದಾಖಲೆಗಳು ಹೇಗೆ ನಮ್ಮ ವರ್ತಮಾನವನ್ನು ಹಾಳುಗೆಡವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವವರು ಅಸಾದಿಯವರ ಈ ಪುಸ್ತಕವನ್ನು ಧ್ಯಾನಿಸಿ ಓದಬೇಕು. ಇದರಲ್ಲಿ ಅನೇಕ ವಿಷಯಗಳನ್ನು ಆಧರಿಸಿಕೊಂಡು ನಮ್ಮ ಸಂಶೋಧನೆಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಿದೆ' ಇದು ಕೃತಿಯ ಕುರಿತಂತೆ ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆಯವರ ಅನಿಸಿಕೆ.

ಈ ಕೃತಿಯು ಭಾರತದಲ್ಲಿರುವ ಸುಮಾರು 20 ಕೋಟಿ ಮುಸಲ್ಮಾನರನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾಗಿರುವ ಒಂದು ಚೌಕಟ್ಟನ್ನು ಒದಗಿ ಸಿಕೊಡುತ್ತದೆ. ಮುಖ್ಯವಾಗಿ ರಾಜಕೀಯವಾಗಿ ಪ್ರಜ್ಞಾವಂತರಾಗಬೇಕಾದರೆ, ಜಾಗೃತರಾಗಬೇಕಾದರೆ ಮೇಲ್ ಸ್ತರದಲ್ಲಿರುವ ಮುಸ್ಲಿಮರು ಮೊದಲು ತಮ್ಮೊಳಗಿರುವ ವಾಸ್ತವವನ್ನು ಗುರುತಿಸಿಕೊಂಡು ಅದನ್ನು ಒಪ್ಪಿಕೊಳ್ಳಬೇಕಾಗಿದೆ. ಆದುದರಿಂದ ಮುಸ್ಲಿಮರ ಕುರಿತಂತೆ ಅರಿವಿಲ್ಲ ಇತರರಿಗೆ ಮಾತ್ರವಲ್ಲ, ಸಾಮಾಜಿಕ ಮತ್ತು ರಾಜಕೀಯವಾಗಿ ಜಾಗೃತರಾಗಬೇಕಾದ ಮುಸ್ಲಿಮರಿಗೂ ಈ ಕೃತಿ ಮಾರ್ಗದರ್ಶನವಾಗಿದೆ.

ಇದೊಂದು ಸಂಶೋಧನಾ ಗ್ರಂಥವೆಂದು ಹೇಳಿಕೊಳ್ಳುವುದರಲ್ಲಿ ನನಗೆ ಸಂಕೋಚವಿಲ್ಲ. ಈ ಸಂಶೋಧನೆಯ ಹಿಂದೆ ಬಾಲ್ಯದ ನೆನಪುಗಳಿವೆ. ವೈಯಕ್ತಿಕವಾಗಿ ಮತ್ತು ಸಮಷ್ಟಿಯಾಗಿ ಎದುರಿಸಿದ ಸಮಸ್ಯೆಗಳಿವೆ. ಇತಿಹಾಸದ ಭಾರವಿದೆ. ಅದಕ್ಕಾಗಿಯೇ ಪ್ರತಿ ಪುರಾವೆಗಳನ್ನು ನೀಡಲು ಯತ್ನಿಸಿದ್ದೇನೆ. ವಿವಿಧ ಬೌದ್ಧಿಕ ವಾದಿಸಿದ್ದೇನೆ. ಆದರೂ ಸಾಕಷ್ಟು ವಿಷಯಗಳು ಮತ್ತು ಜಾತಿಗಳು ಈ ಅಧ್ಯಯನದಿಂದ ಹೊರಗಿ ವೆ. ಆದ ಕಾರಣ ಇದನ್ನು ಪರಿಪೂರ್ಣವಾದ ಸಂಶೋಧನಾ 'ಬಯುಸುವುದಿಲ್ಲ'' ಇದು ಕೃತಿಯ ಲೇಖಕ ಅಸಾದಿಯವರ ಮಾತು.

Related Books