ಮಾರ್ಕ್ಸ್ ಮತ್ತು ವಿಜ್ಞಾನ

Author : ಜಿ. ರಾಮಕೃಷ್ಣ

Pages 40

₹ 18.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಇಡೀ ಜಗತ್ತಿನ ಕಾರ್ಮಿಕ ವರ್ಗದ ಮಹಾನ್ ನಾಯಕನೆಂದೇ ಪರಿಗಣಿತವಾಗಿದ್ದ ಕಾರ್ಲ್ಸ್ ಮಾರ್ಕ್ಸ್, ಆತನ ವೈಜ್ಞಾನಿಕ ವಿಚಾರಗಳನ್ನು ಅರ್ಥವತ್ತಾಗಿ ಪ್ರತಿಪಾದಿಸಿದ ಲೇಖನವೇ ಮಾರ್ಕ್ಸ್ ಮತ್ತು ವಿಜ್ಞಾನ. ಚಿಂತಕ ಜಿ. ರಾಮಕೃಷ್ಣ ಅವರು ಬರೆದಿದ್ದು, ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಎಚ್. ಎನ್. ದತ್ತಿನಿಧಿ ಪ್ರಶಸ್ತಿ’ (2009) ಲಭಿಸಿದೆ. ಮಾರ್ಕ್ಸ್ ಒಬ್ಬ ಅರ್ಥಶಾಸ್ತ್ರಜ್ಞ ಅಥವಾ ಅರ್ಥಶಾಸ್ತ್ರದ ಸಿದ್ಧಾಂತಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರತಿಪಾದಿಸಿದ ಎಂದೇ ತಿಳಿಯಲಾಗುತ್ತದೆ. ಆದರೆ, ಆತನ ವೈಜ್ಞಾನಿಕ ಧೋರಣೆಗಳು ಆತನನ್ನು ಹೇಗೆ ರೂಪಿಸಿದ್ದವು ಎಂಬ ಬಗ್ಗೆ ವಿಭಿನ್ನ ವ್ಯಕ್ತಿತ್ವದ ಒಳನೋಟ ಕಲ್ಪಿಸುವ ಕೃತಿ ಇದಾಗಿದೆ.

About the Author

ಜಿ. ರಾಮಕೃಷ್ಣ

ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...

READ MORE

Related Books