ಲೇಖಕ ಜಿ.ಎಸ್. ಜಯದೇವ ಅವರ ಕೃತಿ- ಜಾಗತೀಕರಣ, ಶಿಕ್ಷಣ ಮತ್ತು ಸಮಾಜ. ಶಿಕ್ಷಣ ಹಾಗೂ ಸಮಾಜ ಒಂದಕ್ಕೊಂದು ಪೂರಕ. ಒಂದರ ಸ್ವಲ್ಪ ಬದಲಾವಣೆಯು ಮತ್ತೊಂದರಲ್ಲಿ ಕಾಣಿಸುತ್ತದೆ. ಆದರೆ, ಜಾಗತೀಕರಣವು ಈ ಎರಡೂ ಕ್ಷೇತ್ರಗಳ ಮೇಲೆ ದುಷ್ಟಪರಿಣಾಮ ಬೀರುತ್ತದೆ. ಈ ಕುರಿತ ವಿಶ್ಲೇಷಣೆಯನ್ನು ಒಳಗೊಂಡ ಕೃತಿ.
ಚಾಮರಾಜನಗರದಲ್ಲಿ ನೆಲೆಸಿರುವ ಜಿ.ಎಸ್.ಜಯದೇವ ಅವರು 'ದೀನಬಂಧು' ಎಂಬ ಸಂಸ್ಥೆ ಪ್ರಾರಂಭಿಸಿದ್ದಾರೆ. 1992 ರಲ್ಲಿ ಆರಂಭವಾದ ಸಂಸ್ಥೆಯು ಸರ್ಕಾರಿ ಶಾಲೆಯ ಮಕ್ಕಳನ್ನು ದತ್ತು ಪಡೆದು, ಅವರಿಗೆ ವಸತಿ, ಊಟ, ಮತ್ತು ಬಟ್ಟೆಯನ್ನು ಪೂರೈಸುವ ಕಾರ್ಯ ಮಾಡುತ್ತಿದೆ. ಪ್ರಾಧ್ಯಾಪಕರಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮೈಸೂರಿನಲ್ಲಿರುವ ಮಹಿಳಾ ಪುನರ್ವಸತಿ ಕೇಂದ್ರವಾದ 'ಶಕ್ತಿಧಾಮ'ದಲ್ಲಿ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಜಯದೇವ ಅವರು ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಮಗ. ಪ್ರಜಾವಾಣಿಯಲ್ಲಿ ’ಹಳ್ಳಿ ಹಾದಿ’ ಎಂಬ ಅಂಕಣ ಬರೆಯುತ್ತಿದ್ದರು. ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ...
READ MORE