ಡಾ. ಎಚ್.ಎನ್. ನಾಗಮೋಹನದಾಸ್ ಅವರು ರಚಿಸಿದ ಕೃತಿ-ರೈತರ ಭದ್ರತೆ ದೇಶದ ಭದ್ರತೆ. ದೇಶ ಹಾಗೂ ರೈತ -ಈ ಎರಡನ್ನೂ ತೌಲನಿಕವಾಗಿ ವಿಶ್ಲೇಷಿಸಿ ಅಂತಿಮವಾಗಿ ರೈತರ ಸುರಕ್ಷತೆಯನ್ನು ದೇಶದ ಸುರಕ್ಷತೆ ಎಂದೂ ಪ್ರತಿಪಾದಿಸಿದ ಬರೆಹಗಳು ಇಲ್ಲಿವೆ. ಒಂದು ದೇಶ ಸುರಕ್ಷಿತವಾಗಿರಬೇಕಾದರೆ ಅಲ್ಲಿಯ ಜನಕ್ಕೆ ಅನ್ನ ನೀಡುವ ರೈತ ಸದೃಢನಾಗಿರಬೇಕು. ಆತನ ಬಹುತೇಕ ಅಗತ್ಯಗಳು ಸರಾಗವಾಗಿ ಈಡೇರುವಂತಿರಬೇಕು. ಆತನೇ ದೇಶದ ಮಾಲೀಕ. ಆದರೆ, ಆತನು ದಿವಾಳಿಯಾಗುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ ಎಂದು ಲೇಖಕರು ಎಚ್ಚರಿಸಿದ್ದಾರೆ.
ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ. ...
READ MORE