ಲಿಂಗಾಯತ-ಸ್ವತಂತ್ರ ಧರ್ಮ ಕೃತಿಯು ಚಿಂತನೆಗಳ ಬರೆಹ. ಲಕ್ಷ್ಮಣ ಕೌಂಟೆ ಕೃತಿಯ ಕರ್ತೃ. ಲಿಂಗಾಯತ-ವೀರಶೈವ ಎರಡೂ ಒಂದೆಯೇ?, ಲಿಂಗಾಯತ-ಕನ್ನಡಿಗರು ಸೃಷ್ಟಿಸಿದ ಮೊದಲ ಧರ್ಮ, ಲಿಂಗಾಯತರು ಹಿಂದೂಗಳೇ? ಜಗದ್ಗುರುಗಳು ಎಷ್ಟು, ಅವರ ಇತೀ ವೃತ್ತಗಳು, ವೀರಶೈವ; ಸಾಹಿತ್ಯದಲ್ಲಿ ವ್ಯಾಪಕ ಬಳಕೆ ಏಕೆ? ಇತ್ಯಾದಿ ಚಿಂತನೆಯೇ ಜೀವಾಳವಾಗಿರುವ ಸುಮಾರು 15 ಲೇಖನಗಳು ಈ ಕೃತಿಯಲ್ಲಿವೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE