ಸ್ಪಂದನ

Author : ಸದಾನಂದ ನಾರಾವಿ

Pages 162

₹ 200.00




Year of Publication: 2019
Published by: ಜಾಗೃತಿ ಪ್ರಿಂಟರ್ಸ್
Address: #56/1-6, ನರಸಿಂಹಯ್ಯ ಗಾರ್ಡನ್, ಮಾಗಡಿ ಮುಖ್ಯರಸ್ತೆ, ಬೆಂಗಳೂರು
Phone: 9740066842

Synopsys

‘ಸ್ಪಂದನ’ ಲೇಖಕ ಸದಾನಂದ ನಾರಾವಿ ಅವರ ಸಮಕಾಲೀನ ಚಿಂತನೆಗಳ ಸಂಕಲನ. ಗಾಢ ಅನುಭವವೇ ಬರಹಗಾರನ ಮೂಲ ಬಂಡವಾಳ. ದುಡಿಮೆ ಗಾಗಿ ಹೊಸಪೇಟೆ, ಬಳ್ಳಾರಿ ಸೇರಿದ ನಾರಾವಿಯವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜೈಲಿನ ಊಟದೊಂದಿಗೆ ಸಾಹಿತ್ಯ ಜೀವನದ ಪಾಠ ಕಲಿತವರು. ಅರಣ್ಯ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿದ ನಾರಾವಿ, ಬಳಿಕ ಅಂಚೆ ಪೇದೆಯಾಗಿ,  ಅಂಚೆ ಸಹಾಯಕರಾಗಿ ಬಡ್ತಿ ಹೊಂದಿ, ಪೋಸ್ಟ್ ಮಾಸ್ತರರಾಗಿ ನಿವೃತ್ತರಾದರು.

ತಮ್ಮ ಸಮಕಾಲೀನ ಅವಧಿಯಲ್ಲಿ ಪ್ರಕಟಗೊಂಡ ಇತರರ ಕೃತಿಗಳನ್ನು ಓದಿ ಅವಲೋಕನ ಮಾಡಿದ ಬರಹಗಳು ಈ ಸಂಕಲನಗಳಲ್ಲಿವೆ. ನಾಡಿನಾದ್ಯಂತ ನಡೆದ ಕಲಾ ಕಾರ್ಯಗಳಿಗೊಂದು ಸುಂದರ ದಾಖಲೆಯನ್ನು ಈ ಕೃತಿ ಒದಗಿಸಿದೆ. ಕಾಂತಾವರ ಕನ್ನಡ ಸಂಘದ ಚಟುವಟಿಕೆಗಳಿಗೆ ಸಂಬಂಧಿಸಿದ ಲೇಖನಗಳೂ ಇಲ್ಲಿವೆ.

 

About the Author

ಸದಾನಂದ ನಾರಾವಿ

ಸದಾನಂದ ನಾರಾವಿಯವರು ಅಂಚೆ ಇಲಾಖೆಯಲ್ಲಿ 29 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುವ ಸದಾನಂದ ನಾರಾವಿಯವರು 'ಮುತ್ತುಮಲ್ಲಿಗೆ', 'ಸಂರಚನೆಯ ಸುತ್ತಮುತ್ತ' (ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ ವಿಜೇತ ಕೃತಿ), 'ಉಜ್ರೆ ಈಶ್ವರ ಭಟ್', 'ಡಾ.ಕೆ, ಪ್ರಭಾಕರ ಆಚಾರ್' ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರಶಸ್ತಿ, ತುಳು ಕತೆಯೊಂದಕ್ಕೆ ತುಳು ಒಕ್ಕೂಟದ ಪ್ರಥಮ ಬಹುಮಾನ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ...

READ MORE

Related Books