'ಕಷ್ಟಜಾತಿಗಳು' ಎಂಬ ನುಡಿಯನ್ನು ದೇವರ ದಾಸಿಮಯ್ಯ ಬಳಸಿದ್ದಾನೆ. ಈ ಕಷ್ಟಕುಲದವರು ಅಸ್ಪಶ್ಯರು ಎಂಬುದು ಅವರ ವಚನಗಳಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಅನೇಕ ಸಂದರ್ಭದಲ್ಲಿ ವಚನ ಸಂಸ್ಕೃತಿಯ ವೈಫಲ್ಯದ ಬಗ್ಗೆ ನಾವು ಇಂದು ಮಾತನಾಡುತ್ತಿರುತ್ತೇವೆ. ವಚನ ಸಂಸ್ಕೃತಿಯ ಅಭಿಮಾನಿಗಳು ಅದರ ಮೇಲಿನ ಟೀಕೆಯನ್ನು ಅದೊಂದು ಮಾಡಬಾರದ ತಪ್ಪು ಎನ್ನುವ ರೀತಿಯಲ್ಲಿ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಈ ಎರಡೂ ಸಂಗತಿಗಳಿಗೆ ಅರ್ಥವಿಲ್ಲ. ವಚನ ಸಂಸ್ಕೃತಿಯು ವಿಫಲವಾಯಿತೆಂದರೆ ಅದರ ಅರ್ಥವೇನು? ಈ ಬಗೆಯ ಸಾಮಾಜಿಕ ಚಳುವಳಿಗಳ ಯಶಸ್ಸು-ವೈಫಲ್ಯಗಳನ್ನು ಯಾಂತ್ರಿಕವಾಗಿ ಮೌಲ್ಯಮಾಪನ ಮಾಡಲು ಬರುವುದಿಲ್ಲ.
ಈ ಬಗೆಯಲ್ಲಿ ವಚನಕಾರರು ಕಷ್ಟ ಕುಲದ ಬಗ್ಗೆ ಮಾತನಾಡುತ್ತಿದ್ದಾರೆಂದರೆ ಅದು ಅಂದು ದೊಡ್ಡ ಸಮಸ್ಯೆಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ವಚನಕಾರರು ಅದರ ವಿರುದ್ಧ ಚಳುವಳಿ ನಡೆಸಿದರು. ಆ ಚಳುವಳಿಯಲ್ಲೇ ಅದರ ಸಮಸ್ಯೆಯಿದೆ. ಚಳುವಳಿಯ ಮಿತಿಗಳ ಬಗ್ಗೆ ಪ್ರಸ್ತುತ ವಚನವು ಬೆಳಕು ಚೆಲ್ಲುತ್ತದೆ.
ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್. ಚಂದ್ರಶೇಖರ್ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...
READ MORE