‘ಸಾರ್ಥ ಮತ್ತು ಬುದ್ಧ ಹಾಗೂ ಬಚ್ಚಿಟ್ಟ ಐತಿಹಾಸಿಕ ಸತ್ಯಗಳ ಹುಡುಕಾಟ’ ಕೃತಿಯು ಸಿ.ಎಚ್ ರಾಜಶೆಖರ್ ಅವರ ವೈಚಾರಿಕತೆಯನ್ನು ಒಳಗೊಂಡ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ಐತಿಹಾಸಿಕ ಸತ್ಯಗಳ ಹುಡುಕಾಟವು ಹೌದು. ಲೇಖಕರು ಕೆಲವೊಂದು ನೈತಿಕ ಪ್ರಶ್ನೆಗಳ ಕುರಿತು ಮಾತನಾಡುತ್ತಾರೆ. ಭೈರಪ್ಪನವರ ಸಾರ್ಥ ಕಾದಂಬರಿಯಲ್ಲಿ ಕಂಡು ಬರುವ ಐತಿಹಾಸಿಕ ಲೋಪದೋಷದ ಬಗ್ಗೆ ಮುಕ್ತ ಮತ್ತು ವಸ್ತುನಿಷ್ಠ ಮನಸ್ಸಿನಿಂದ ಚರ್ಚಿಸುವ ಸಲುವಾಗಿ ಈ ವೈಚಾರಿಕ ವಿಮರ್ಶಾ ಕೃತಿಯನ್ನು ಬರೆದಿದ್ದೇನೆ ಎನ್ನುತ್ತಾರೆ ಲೇಖಕ ಸಿ.ಎಚ್ ರಾಜಶೇಖರ್.
ಈ ಕೃತಿಯು, ಸಾರ್ಥ: ವಿಮರ್ಶೆಗೂ ಮುನ್ನ ಐತಿಹಾಸಿಕ ಸ್ವವಿಮರ್ಶೆ, ಕುಮರಿಲಭಟ್ಟ ಹುಟ್ಟು ಹಾಕಿದ ಅಶ್ವಮೇಧಯಾಗ ಅಂದು ಮತ್ತು ಇಂದು, ಬುದ್ಧ ಪೂಜ್ಯನೋ? ಭಿಕ್ಷುಕರ ಗುತ್ತಿಗೆದಾರನೋ?, ಪರಕಾಯ ಪ್ರವೇಶ ಎಂಬ ದೊಂಬರಾಟ ಮತ್ತು ತಾತ್ವಿಕ ಜಿಜ್ಞಾಸೆ, ಅಸತ್ಯವೇ ಸತ್ಯವಾದರೆ ಸತ್ಯ ಏನಾಗಬೇಕು?, ವಿಕೃತಕಾಮ ಧರ್ಮವೋ? ಧರ್ಮದ ಅನಿವಾರ್ಯ ಭಾಗವೋ, ಪ್ರಕೃತಿಗೂ ಮಿಗಿಲು ದೇವರುಂಟೇ, ಹಿಂದೂ ಹಿಂದುತ್ವದ ಹಿಂದೆ ವೈದಿಕ ಮತ್ತು ವೈದಿಕತ್ವದ ರಹಸ್ಯ ಹುನ್ನಾರುಗಳು, ಕೇಸರೀಕರಣ ಮತ್ತು ಗುಲಾಮಿತನ, ಮನುವಾದಿಗಳು ಏಕೆ ಮಾನವತಾವಾದಿಗಳಲ್ಲ, ಬುದ್ಧ ಏಕೆ ವೈದಿಕರನ್ನು ನಿರಂತರ ಕಾಡುತ್ತಾನೆ, ಸತ್ಯ ಬಯಲಾದಾಗ ಪ್ರಳಯ ಏಕೆ ಸಂಭವಿಸುತ್ತದೆ, ರಾಮರಾಜ್ಯ ಮತ್ತು ಬುದ್ಧನ ಸುಖೀರಾಜ್ಯ, ಒಬ್ಬರ ಧರ್ಮ ಮತ್ತೊಬ್ಬರ ಪಾಲಿಗೇಕೆ ಅಧರ್ಮ, ಮೂಲನಿವಾಸಿಗಳೇ ನೀವೆಷ್ಟು ಬಲ್ಲಿರಿ ನಿಮ್ಮ ಇತಿಹಾಸ, ಬುದ್ಧನ ಪ್ರಭಾವಳಿ ಮತ್ತು ವೈದಿಕರ ಮಾರ್ಗ, ಉಪಸಂಹಾರ ಹೀಗೆ ಒಟ್ಟು 17 ಶೀರ್ಷಿಕೆಗಳನ್ನು ಒಳಗೊಂಡಿವೆ.
©2024 Book Brahma Private Limited.