`ಚಿಂತನ ಮಂಥನ' ಕೃತಿಯಲ್ಲಿ 9 ಚಿಂತನಪರ ಮತ್ತು ಸಮೀಕ್ಷಾತ್ಮಕ ಲೇಖನಗಳಿವೆ. ಬಾರಮಾಸ, ದುಃಖ, ಸಾಂಖ್ಯದರ್ಶನ, ಮೋಡಿ ಲಿಪಿ, ಹಿಂದೀ ಕನ್ನಡ ಭಾಷಾ ವೈಶಿಷ್ಠ್ಯ ಮುಂತಾದ ವಿಶ್ಲೇಷಣಾತ್ಮಕ, ಸಂಶೋಧನಾತ್ಮಕ ಹಾಗೂ ವೈಚಾರಿಕ ಲೇಖನಗಳಿವೆ. ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರು ಕೃತಿ ರಚಿಸಿದ್ದಾರೆ.
ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು. ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...
READ MOREಹೊಸತು-2004- ಆಗಸ್ಟ್
ಇದು ಚಿಂತನಶೀಲ ಬರಹಗಳಾಗಿದ್ದು ಚುರುಕಾದ ವಿಮರ್ಶೆ ಯನ್ನೊಳಗೊಂಡಿವೆ. ಹಿರಿಯ ಭಾಷಾಂತರಕಾರರೂ ಬರಹಗಾರರೂ ಆಗಿರುವ ಭಾಲಚಂದ್ರ ಜಯಶೆಟ್ಟಿ ಕಾವ್ಯ, ಮಹಾಕಾವ್ಯಗಳ ಹಾಗೂ ತಾತ್ವಿಕ ಸಾಹಿತ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಇಲ್ಲಿನ ವಿಚಾರಗಳು ಎಷ್ಟೋ ಕಲ್ಪನಾ ಸಾಹಿತ್ಯದ ಕನಸಿನ ಲೋಕದಲ್ಲಿ ತೇಲಿಹೋಗದೆ ನಿಜವಾದ ಅರ್ಥದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂತಹವಾಗಿವೆ. ತಮ್ಮ ಓದಿನ ಮೂಲಗಳಿಂದ ವಿಷಯ ಗ್ರಹಣ ಮಾಡಿದಾಗ ಉದ್ಭವಿಸುವ ಅನೇಕ ಪ್ರಶ್ನೆಗಳಿಗೆ ತಮ್ಮಲ್ಲೇ ವಿಚಾರ ಮಂಥನ ನಡೆಸಿ ಕಂಡುಕೊಂಡ ಒಳದನಿಗಳು ಇಲ್ಲಿ ದಾಖಲಾಗಿವೆ. ಈ ವ್ಯಾಪ್ತಿಯಲ್ಲಿ ಭಾಷಾ ವೈಶಿಷ್ಟ್ಯ, ಚಾರಿತ್ರಿಕ ಅಂಶಗಳು, ಬದುಕಿಗೆ ಸ್ಪಂದಿಸುವ ಅನೇಕ ವಿಷಯಗಳು ಸೇರಿವೆ.