ನಾನೇಕೆ ಬುದ್ಧನ ಬಗ್ಗೆ ಬರೆದೆ..!

Author : ಸಿ.ಎಚ್. ರಾಜಶೇಖರ್

Pages 235

₹ 160.00




Year of Publication: 2014
Published by: ಸೌಮ್ಯಶ್ರೀ ಪ್ರಕಾಶನ
Address: #658, 3ನೇ ಅಡ್ಡ ರಸ್ತೆ, ಟೀಚರ್‍ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು
Phone: 7829068573

Synopsys

‘ನಾನೇಕೆ ಬುದ್ಧನ ಬಗ್ಗೆ ಬರೆದೆ..!’ ಕೃತಿಯು ಸಿ.ಎಚ್. ರಾಜಶೇಖರ ಅವರ ವೈಚಾರಿಕ ಲೇಖನಗಳ ಸಂಕಲನವಾಗಿದೆ. ಈ ಕೃತಿಯು 25 ಬಿಡಿ ಸಂಪುಟಗಳನ್ನು ಒಳಗೊಂಡಿದ್ದು, ಸಮಗ್ರ ಬುದ್ಧ ಸಾಹಿತ್ಯ ಮಾಲೆಯ ಮುಂದುವರೆದ 26ನೇ ಸಂಪುಟವಾಗಿದೆ. ಈ ಕೃತಿಯಲ್ಲಿ ಜ್ಞಾನೋದಯಗೊಂಡ ಗೌತಮ ಬುದ್ಧರ ಅನನ್ಯ ವ್ಯಕ್ತಿತ್ವ, ಪ್ರಸ್ತುತತೆ, ಸರಿಸಾಟಿ ಇಲ್ಲದ ಮೇರು ಚಾರಿತ್ಯ, ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ, ಅವರ ಸತ್ಯ ಮತ್ತು ಸರಳತೆ, ಅನುಪಮ ತತ್ವಶಾಸ್ತ್ರ ಮುಂತಾದುವನ್ನು ಐತಿಹಾಸಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ವಿಮರ್ಶಿಸಲಾಗಿದೆ. ಅಷ್ಟಲ್ಲದೇ, ಈ ಕೃತಿಯು ಕೆಲವು ಪ್ರಮುಖ ವಿಚಾರಗಳಾದ ಹೀಗೇಕೆ?, ಇದರ ಅಗತ್ಯ ಪಟ್ಟಭದ್ರ ಪುರೋಹಿತಶಾಹಿಗಳಿಗೆ ಏನಿತ್ತು? ಏಕೆ ಇತ್ತು? ಇದರ ಪ್ರಸ್ತುತ ರಾಜಕೀಯ ಮತ್ತು ಐತಿಹಾಸಿಕ ಹಿನ್ನಲೆ ಏನು? ಆದರೂ ಬುದ್ಧನನ್ನು ಏಕೆ ವೈದಿಕ ಧರ್ಮದ ಒಂದು ಭಾಗವನ್ನಾಗಿ ಪರಿಗಣಿಸಿದರು? ಬುದ್ಧನನ್ನು ಏಕೆ ದಶವತಾರದಲ್ಲಿ ಎಂಬತ್ತನೇಯ ಅವತಾರಕ್ಕೆ ಸೇರ್ಪಡೆ ಮಾಡಿಕೊಂಡರು? ಅದರ ನಂತರ ಅವರು ಬುದ್ಧನನ್ನು ಏಕೆ ಕಡೆಗಣಿಸಿದರು? ಬುದ್ಧನ ಸಾಹಿತ್ಯ, ತತ್ವಶಾಸ್ತ್ರ ಮತ್ತು ಇತಿಹಾಸವನ್ನು ಏಕೆ ಸರ್ವನಾಶ ಮಾಡಿದರು? ಇದೇ ವೈದಿಕ ಪುರೋಹಿತಶಾಹಿಗಳು ಬುದ್ಧರ ಸಾಹಿತ್ಯಕ್ಕೆ ಏಕೆ, ಪ್ರತಿ ಸಾಹಿತ್ಯವನ್ನು ರಚಿಸಿದರು? ಬುದ್ಧ ಯಾವುದನ್ನು ಸತ್ಯವೆಂದು ಸಾರಿದರೋ, ಅದನ್ನು ಅಸತ್ಯ ಎಂದು ಏಕೆ ತಮ್ಮ ಧರ್ಮಗ್ರಂಥ, ಪುರಾಣ ಮತ್ತು ಪುಣ್ಯಕಥೆಗಳಲ್ಲಿ ಬರೆದುಕೊಂಡರು? ಬುದ್ಧರ ಪ್ರಖರ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇವರ ಪಾಲಿಗೆ ಏಕೆ ಮತ್ತು ಹೇಗೆ ಅವೈಚಾರಿಕತೆ ಹಾಗೂ ಅವೈಜ್ಞಾನಿಕತೆಯಾಯಿತು? ಬುದ್ಧರ ಸಕಲ ತತ್ವಶಾಸ್ತ್ರ, ಧರ್ಮ, ಇತಿಹಾಸ ಮತ್ತು ಸಂಸ್ಕೃತಿಯನ್ನು ಏಕೆ ಇವರ ಸ್ವಲಾಭ ಮತ್ತು ಸಮಯಸಾಧಕತೆಗಾಗಿ ತಿರುಚಿದರು? ಇದರ ಹಿಂದಿನ ಹುನ್ನಾರಗಳೇನು? ಹೀಗೆ ಸುದೀರ್ಘವಾಗಿ ಚರ್ಚಿಸುವಂತಹ ವಿಚಾರಗಳನ್ನು ಹಿಡಿದುಕೊಂಡು ವೈಚಾರಿಕ ಕೃತಿಯನ್ನು ಬರೆದಿದ್ದಾರೆ.

ನಾನೇಕೆ ಬುದ್ಧರ ಬಗ್ಗೆ ಬರೆದೆ, ಧರ್ಮದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಏಕೆ ಮಹತ್ವದ ಚರ್ಚೆಯ ಮೂಲ, ಬುದ್ಧರ ಲೋಕವನ್ನು ಪ್ರವೇಶಿಸುವ ಮುನ್ನ, ಧರ್ಮದ ಹುಟ್ಟು ಸಮಸ್ಯೆಗಳ ಪರಿಹಾರಕ್ಕೋ, ಅಥವಾ ಉಲ್ಬಣಕ್ಕೋ, ಬೋಧಿಸತ್ವರು ಎಂದರೆ ಯಾರು, ಅವರ ಉದ್ದೇಶ ಮತ್ತು ಗುರಿ ಏನು, ಜ್ಞಾನೋದಯಗೊಂಡ ಬುದ್ಧರು ಏನನ್ನು ಅರಿತರು, ಜ್ಞಾನೋದಯದ ಬಳಿಕ ಬುದ್ಧರ ಚಿಂತನ ಮಂಥನ, ಧರ್ಮವನ್ನು ಬೋಧಿಸಲೋ? ಬೇಡವೋ?, ತುಮುಲದಲ್ಲಿ ಬುದ್ಧರು, ಧಮ್ಮಚಕ್ರ ಉರುಳಿಸುವ ಮುನ್ನ ಬುದ್ಧರ ಪ್ರಥಮ ಬೋಧನೆ, ಕೇವಲ ಮನುಷ್ಯ ಹೇಗೆ ದೇವರಂತಾಗಬಲ್ಲ, ಸತ್ಯದ ಹಿಂದಿನ ಸತ್ಯ ಎಂದರೆ ಏನು?, ಅರಿಯುವ ಬಗೆ ಹೇಗೆ, ಬುದ್ಧ ನಿನಗೆ ನೀನೇ ಎಂದರು ಏಕೆ, ನಮ್ಮ ತಪ್ಪುಗಳು ನಮ್ಮೊಳಗೇ ಅಡಗಿದೆ ಹೇಗೆ, ಬುದ್ಧ ಸಾಮಾಜಿಕ ನ್ಯಾಯಕ್ಕೆ ಏಕೆ ಗಾಢ ಒತ್ತು ಕೊಟ್ಟರು, ಬುದ್ಧರು ಸರಳತೆಯೇ ಸತ್ಯ ಎಂದರು ಏಕೆ, ತ್ರಿಪಿಟಿಕ ಸಾಹಿತ್ಯ ಉಳಿದ ಬೆಳೆದ ಬಗೆ ಹೇಗೆ, ಅಶೋಕ ಯಾರು?, ಅವನು ಹೇಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ? ಹೀಗೆ ಈ ಕೃತಿಯು 17 ಕತಾವಸ್ತುಗಳನ್ನು ಒಳಗೊಂಡಿದೆ.

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books