ಲೇಖಕ ಅರವಿಂದ ಚೊಕ್ಕಾಡಿ ಅವರು ಬರೆದ ಕೃತಿ-ಗಾಂಧಿ ಮೌಲ್ಯಗಳ ನಡುವಿನ ಮೌನ. ಗಾಂಧಿ ಜೀವನದ ಎಪ್ಪತ್ತೊಂಬತ್ತು ಘಟನೆಗಳ ಮೂಲಕ ಜೀವನ ಮೌಲ್ಯಗಳ ಶೋಧವನ್ನು ನಡೆಸಿರುವ ಕೃತಿಯನ್ನು ಅವರ 150 ಜನ್ಮದಿನಾಚರಣೆಯ ನೆನಪಿಗಾಗಿ ಬರೆದ ಕೃತಿ. ಬಾಪು ಅವರ ವ್ಯಕ್ತಿತ್ವ, ಹಾಸ್ಯ ಪ್ರಜ್ಞೆ, ಸಂಪನ್ನ ಗುಣಗಳ ಕುರಿತು ಈ ಕೃತಿಯಲ್ಲಿ ಪುಟ್ಟ ಪುಟ್ಟ ಲೇಖನಗಳ ಮೂಲಕ ತಿಳಿಸಿಲಾಗಿದೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE