ತಾಳ್ಮೆ ಮತ್ತು ಸಹಾನುಭೂತಿಯ ಶಕ್ತಿಯನ್ನು ಪ್ರದರ್ಶಿಸುವ 'ಬೊಗಸೆ'ಯ ಆಯ್ದ ಬರಹಗಳು ಮನುಷ್ಯನಲ್ಲಿ ಈ ದೊಡ್ಡ ಗುಣಗಳತ್ತ ಚರ್ಚಿಸುತ್ತದೆ. ‘ಬದುಕೆಂದರೆ ಒಂದು ಹೃದ್ಯ ಕಾವ್ಯ', 'ನೆಳಲು ಬೆಳಕಿನ ತೆಕ್ಕೆಯೊಳಗೆ ', 'ಈ ಬದುಕಿಗೆ, ಆ ಇಳೆಗೆ ', 'ಕನ್ನಡಿಯೊಳಗಿನ ಗಂಟು ಈ ಮನಸು ', 'ಅಂತ್ಯದ ಎದುರಲ್ಲೇ ಹೊಸತನಕ್ಕೆ ಹೆಜ್ಜೆ ', 'ಕಣ್ಣುಗಳು ಕಂಬನಿಯ ಕಡಲು ' ಮುಂತಾದ 25ಕ್ಕೂ ಹೆಚ್ಚು ಬರಹಗಳನ್ನು ಒಟ್ಟು ಮಾಡಿ ಓದುಗರ ಮುಂದಿಟ್ಟಿದ್ದಾರೆ ಲೇಖಕ ಪೂರೀಗಾಲಿ ಮರಡೇಶ ಮೂರ್ತಿ..
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE