ಕಲೆ ಮತ್ತು ಜೀವನ ಕುರಿತ ಐಯ್ವತ್ತು ವರುಷಗಳ ಜಿಜ್ಞಾಸೆ ‘ಅವಿನಾಭಾವʼ ವೈಚಾರಿಕ ಲೇಖನ ಸಂಕಲನವನ್ನು ಲೇಖಕ ಹರಿಹರಪ್ರಿಯ ಅವರು ರಚಿಸಿದ್ದಾರೆ. ಸಂಗೀತ, ನೃತ್ಯ, ದೃಶ್ಯಕಲೆ, ಗಮಕಕಲೆ, ಹರಿಕಥೆ, ಚಲನಚಿತ್ರ ಇತ್ಯಾದಿ ಕರ್ನಾಟಕದ ಕಲಾಕ್ಷೇತ್ರಕ್ಕೆ ಸಂಭಂಧಿಸಿದ ಸಾಮಾನ್ಯೇತರ ಚಿಂತನೆಗಳು ಇಲ್ಲಿ ಅನಾವರಣಗೊಂಡಿದೆ. ಅಗಾಧ ಸ್ಮರಣಶಕ್ತಿಯುಲ್ಲ ಹರಿಹರಪ್ರಿಯರು, ಲಲಿತಕಲರಗಳ ನೆಪದಲ್ಲಿ ಸಮಾಜದ ಮೇಲ್ವರ್ಗದವರ ವಿಮರ್ಶೆ ಮಾಡುತ್ತಲೇ, ಅಂಚಿನ ಸಮುದಾಯಗಳ ಪರ ನಿಲ್ಲುವುದು ಮಾತ್ರವೇ ಅಲ್ಲ, ಆಗಿರುವ ತಪ್ಪುಗಳನ್ನು ಸರಿಪಡಿಸಬೇಕೆನ್ನುವ ಚಿಕಿತ್ಸಕ ದೃಷ್ಟಿಯನ್ನೂ ತೋರಿಸುತ್ತದೆ. ಒಟ್ಟಾರೆಯಾಗಿ ಲಲಿತಕಲೆಗಳ ಕ್ಷೇತ್ರದಲ್ಲಿ ಹಲವು ಚರ್ಚೆಗಳಿಗೆ ನಾಂದಿಯಾಗುವ, ಹೊಸಬೆಳಕು ಚೆಲ್ಲುವ ಅಪರೂಪದ ಪುಸ್ತಕ ಇದು.
ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...
READ MORE