ನವೋತ್ಥಾನದ ಹರಿಕಾರ ಸ್ವಾಮಿ ವಿವೇಕಾನಂದ ವೈಚಾರಿಕ ಬರಹಗಳ ಪುಸ್ತಕವನ್ನು ಲೇಖಕಿ ಆರತಿ ಪಟ್ರಮೆ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಶ್ರೀರಾಮಕೃಷ್ಣರ ಶಿಷ್ಯವರೇಣ್ಯ ಸ್ವಾಮೀ ವಿವೇಕಾನಂದರು ಅದ್ವಿತೀಯ ದೇಶಭಕ್ತ, ಸುಧಾರಕ ಹಾಗೂ ಸಂಘಟಕ; ಮಾತ್ರವಲ್ಲ, ರಾಷ್ಟ್ರೀಯ ಪುನರುತ್ಥಾನದ ಶಕ್ತಿಗಳನ್ನು ಹೊಡೆದೆಬ್ಬಿಸಿ, ಅಜ್ಞಾತವಾಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರುತ್ಥಾನಕ್ಕೆ ಹಾದಿ ಸುಗಮಗೊಳಿಸಿದ ಅಗ್ರಗಣ್ಯ. ರಾಷ್ಟ್ರದ ಪ್ರಾಣಬಿಂದುವಾದ ಧರ್ಮದ ಕಡೆಗೆ ದೇಶದ ಮನಸ್ಸನ್ನು ಸೆಳೆದು ಪುನರುಜ್ಜೀವಿತ ಭಾರತದ ಅಡಿಗಲ್ಲನ್ನು ಅಚಲವೆನಿಸುವಂತೆ ನೆಟ್ಟವರು ಅವರು. ಅವರ ವಿಚಾರಗಳು ಸರ್ವತೋಮುಖ. ಅವರ ಲೇಖನ ಹಾಗೂ ಪ್ರವಚನಗಳು ಲೌಕಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳೆರಡನ್ನೂ ಒಳಗೊಂಡಿದೆ. ಪ್ರಸ್ತುತ ಈ ಪುಸ್ತಕದಲ್ಲಿ ರಾಷ್ಟ್ರದ ಉಜ್ಜ ಲ ಭವಿಷ್ಯ ನಿರ್ಮಾಣಕ್ಕಾಗಿ ನಮ್ಮನ್ನು ಉತ್‌ಸ್ಫೂರ್ತಗೊಳಿಸುವ ಸಂಗತಿಗಳು ಅಡಕಗೊಂಡಿವೆ.
ಲೇಖಕಿ ಆರತಿ ಪಟ್ರಮೆ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರು; ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ ಹಾಗೂ ಲೇಖಕಿ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು. ಮೂಲತಃ ದಕ್ಷಿಣ ಕನ್ನಡದವರು. ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್ ಸಾಹಿತ್ಯ ಹಾಗೂ ಮನಃಶಾಸ್ತ್ರದಲ್ಲಿ ಬಿಎ ಪದವಿ ಪೂರೈಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 2005ರಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದಾರೆ. ‘ವಿಜಯ್ ಟೈಮ್ಸ್’ ಇಂಗ್ಲಿಷ್ ದೈನಿಕದಲ್ಲಿ ಉಪಸಂಪಾದಕಿಯಾಗಿ ವೃತ್ತಿಜೀವನವನ್ನು ಆರಂಭಿಸಿ, ಮುಂದೆ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ...
READ MORE