ಜಗತ್ತನ್ನು ಸೂಕ್ಷ್ಮದೃಷ್ಟಿಯಿಂದ ನೋಡಿ, ಪ್ರಕೃತಿ ದತ್ತವಾದ ಕೆಲ ಅದ್ಭುತ ನಿಯಮಗಳ ಬಗ್ಗೆ ಲೇಖಕರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ನಾವೆಷ್ಟೇ ಮುಂದುವರೆದರೂ, ಎಷ್ಟೇ ತಾಂತ್ರಿಕತೆಯನ್ನು ಅಭಿವೃದ್ದಿಪಡಿಸಿ ಕೊಂಡರೂ, ಬುದ್ದಿಯ ಪರಾಕಾಷ್ಟೆ ಮೆರೆದರೂ ಈ ಜಗತ್ತಿನ ನಿಯಮಗಳನ್ನು ಮೊನೆಯಷ್ಟೂ ಬದಲಾಯಿಸಲಾಗುವುದಿಲ್ಲ ಎಂಬುದು ಲೇಖಕರ ಗಟ್ಟಿ ನಂಬಿಕೆ.
ವೇದ ವಿಚಾರಗಳನ್ನು ಮನನ ಮಾಡುತ್ತಾ ಬದುಕು, ವಿಜ್ಞಾನ, ಜೀವ ಜಗತ್ತುಗಳ ಬಗ್ಗೆ ಚಿಂತನೆ, ಪರಿಶೀಲನೆ ಮಾಡುತ್ತಿದ್ದಾಗ ಅವರಿಗೆ ಹೊಳೆದ ವಿಚಾರಗಳನ್ನು ಇಲ್ಲಿ ದಾಖಲಿಸಿದ್ದಾರೆ. ಒಬ್ಬರಿಗೆ ಕಾಣದ ನಿಯಮ ಮತ್ತೊಬ್ಬರಿಗೆ ಕಾಣಬಹುದು. ಆದರೆ, ’ನಿಯಮಗಳಿರುವಲ್ಲಿ ನಿಯಾಮಕನೂ ಇರುತ್ತಾನೆ' ಎನ್ನುವ ಪ್ರಜ್ಞೆ ಪ್ರತಿ ಪುಟದಲ್ಲೂ ಜಾಗೃತವಾಗಿರುವುದೇ ಈ ಕೃತಿಯ ವೈಶಿಷ್ಟ್ಯ.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE