ಒಂದು ಸಾವಿರ ವರ್ಷಗಳ ಹಿಂದೆಯೇ ರಾಮಾನುಜರು ದಲಿತರ ಪ್ರವೇಶಕ್ಕೆ ದೇಗುಲಗಳ ಬಾಗಿಲು ತೆರೆದವರು. ಗತಕಾಲದ ಈ ಸಂಗತಿಗಳನ್ನು ಲೇಖಕ ಎನ್.ಕೆ. ಮೋಹನ್‌ರಾಂ ಅವರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ರಾಮಾನುಜರು ದಲಿತರಿಗಾಗಿ ಮೇಲುಕೋಟೆಯಲ್ಲಿ ದೇವಸ್ಥಾನ ಕಟ್ಟಿಸಿದ್ದು, ದಲಿತರು ಮತ್ತು ಶೂದ್ರರ ಬಗ್ಗೆ ಅವರು ಒಲವು ತೋರಲು ಕಾರಣವಾದ ಅಂಶಗಳು, ಅವರ ಕ್ರಾಂತಿಕಾರಿ ಹೆಜ್ಜೆಗುರುತುಗಳ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ.
ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ. ದಲಿತರನ್ನು ದೇವಸ್ಥಾನದಿಂದ ಹೊರಗಿಡುತ್ತಿರುವವರಲ್ಲಿ ಬ್ರಾಹ್ಮಣರು ಮಾತ್ರವಲ್ಲ ಶೂದ್ರರು, ಹಿಂದುಳಿದವರೂ ಇದ್ದಾರೆ ಎಂಬ ವಿವರವನ್ನು ಇಲ್ಲಿ ನೋಡಬಹುದು.
ಪತ್ರಕರ್ತ ಎನ್.ಕೆ. ಮೋಹನರಾಂ ಅವರು ಕರ್ನಾಟಕದ ಹಿರಿಯ ಪತ್ರಕರ್ತರಲ್ಲಿ ಒಬ್ಬರು. ಲಂಕೇಶ್ ಅವರ ಒಡನಾಡಿಯಾಗಿದ್ದ ಮೋಹನರಾಂ ಅವರು ಲಂಕೇಶ್, ಜಯಲಲಿತಾ, ರಾಮಾನುಜಾಚಾರ್ಯ ಅವರನ್ನು ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಬಳಸುವ ಭಾಷೆ, ವಿಚಾರಗಳ ಬೌದ್ಧಿಕ ಭಾರದಿಂದ ಕುಸಿಯಕೂಡದು, ಅದನ್ನು ಹೇಳುವ ಕ್ರಮ ನೇರ, ಸರಳ, ಚೇತೋಹಾರಿಯಾಗಿರಬೇಕು: ಲಂಕೇಶರಿಂದ ಇದನ್ನು ಕಲಿತ ಮೋಹನ್ ರಾಂ ಅದನ್ನು ತಮ್ಮ ಪುಸ್ತಕದಲ್ಲಿ ಮುಂದುವರೆಸಿದ್ದಾರೆ. ...
READ MORE