”ಮನುಷ್ಯನ ಮಹಾಯಾನ’ ಕೃತಿಯು ಬಿ.ವಿ.ಕಕ್ಕಿಲ್ಲಾಯ ಅವರ ಜೀವಿತಾವಧಿಯ ಕೊನೆಯ ಪುಸ್ತಕ. ಅವರು ಬರೆಯಬೇಕಿದ್ದ ಎಲ್ಲವನ್ನೂ ಬರೆದು, ಅದನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ, ಬರೆದಿಟ್ಟಿರುವ ಅಧ್ಯಾಯಗಳು ಬಹಳಷ್ಟು ವಿವರಗಳನ್ನು ಹೊಂದಿವೆ. ನಮ್ಮ ಸುತ್ತಮುತ್ತಲಿನ ಮಹಾಗೋಳದ ಹುಟ್ಟಿನಿಂದ ತೊಡಗಿ, ಭೂಮಿಯ ಉಗಮ, ಅದರೊಳಗೆ ಜೀವಿಗಳ ವಿಕಾಸ, ಅವುಗಳಿಂದ ಮನುಷ್ಯನೆಂಬ ಪ್ರಾಣಿಯ ಬೆಳವಣಿಗೆ, ಅದರಲ್ಲಿ ಪ್ರಕೃತಿ ಮತ್ತು ಶ್ರಮಗಳ ಪಾತ್ರ ಇವೆಲ್ಲವನ್ನೂ ವಿವರಿಸಿ, ಮುಂದಕ್ಕೆ ಮಾನವನು ತನ್ನ ಸಮಾಜವನ್ನು ಹಂತಹಂತವಾಗಿ ಬೆಳೆಸಿ ನಿಲ್ಲಿಸಿರುವ ಬಗೆಯನ್ನು ಕಕ್ಕಿಲ್ಲಾಯ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಮನುಷ್ಯನು ಪ್ರಕೃತಿಯ ಕೂಸು, ನಾಗರಿಕತೆಯ ದ್ವಂದ್ವಗಳು, ಪೌರ್ವಾತ್ಯ ಸಾಮ್ರಾಜ್ಯಗಳ ಏಳುಬೀಳು, ಮೋಡಿ ರೂಢಿಗಳಿಂದ ಮತಧರ್ಮಗಳಿಗೆ, ಆಧುನಿಕತೆಯ ಹೊಸ್ತಿಲಲ್ಲಿ, ಗುಲಾಮರ ವ್ಯಾಪಾರ, ಹೊಸ ಧರ್ಮಗಳ ಮೇಲಾಟ ಸೇರಿದಂತೆ ಒಟ್ಟು 31 ವೈಚಾರಿಕ ಲೇಖನಗಳಿವೆ.
ಬಿ.ವಿ. ಕಕ್ಕಿಲ್ಲಾಯರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರು. ಉತ್ತರ ಕೇರಳದ ಕಾಸರಗೋಡು ತಾಲೂಕಿನ ಚೆರ್ಕಳದ ಸಮೀಪ, ಪಯಸ್ವಿನಿ ನದಿಯ ದಂಡೆಯ ಮೇಲಿರುವ ಬೇವಿಂಜೆಯಲ್ಲಿ ಶ್ರೀಮಂತ ಭೂಮಾಲಕರಾಗಿದ್ದ ವಿಷ್ಣು ಕಕ್ಕಿಲ್ಲಾಯರ ಕೊನೆಯ ಮಗನಾಗಿ ಏಪ್ರಿಲ್ 9, 1919 ರಂದು ಬಿ. ವಿ ಕಕ್ಕಿಲ್ಲಾಯ ಜನಿಸಿದರು. ಕಾಸರಗೋಡಿನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದ ಬಳಿಕ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜನ್ನು ಸೇರಿದ ಬಿ ವಿ ಕಕ್ಕಿಲ್ಲಾಯರು ಆ ಕಾಲದಲ್ಲಿ ಉತ್ತುಂಗದಲ್ಲಿದ್ದ ಭಾರತದ ಸ್ವಾತಂತ್ರ್ಯ ...
READ MORE