‘ಕೋಮುವಾದ ಹಾಗೂ-ಭಾರತೀಯ ಇತಿಹಾಸ ಲೇಖನ’ ಇಂಗ್ಲಿಷ್ ಕೃತಿಯ ಕನ್ನಡಾನುವಾದ. ಮೂಲಕೃತಿಯನ್ನು ಇತಿಹಾಸ ತಜ್ಞ ರೊಮಿಲ ಥಾಪರ್, ಹರ್ಬನ್ಸ್ ಮುಖಿಯ, ಬಿಪಿನ್ ಚಂದ್ರ ರಚಿಸಿದ್ದಾರೆ. ಅನುವಾದಕರು ಕೆ. ಎಲ್. ಗೋಪಾಲಕೃಷ್ಣ ರಾವ್.
ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಈ ಆಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳ ಬೇಕಾದರ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ವಿವೇಚಿಸಲಾಗಿದೆ. ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ, ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ ಶಕ್ತಿಗಳ ಹಾಗೂ ತಾಂತ್ರಿಕ ಬೆಳವಣಿಗೆಯ ಮಟ್ಟದ ಮತ್ತು ಉತ್ಪಾದನೆ ಸಂಬಂಧಗಳ ಸ್ಥಿತಿಗತಿಗಳ ಪ್ರತಿಬಿಂಬ. ಇದಷ್ಟೇ ಇತಿಹಾಸ ಲೇಖನದಲ್ಲಿ ನೈಜ ನಿರಂತರತೆಯನ್ನೂ ಒದಗಿಸಬಲ್ಲದು.
ಈ ವಿಚಾರದ ಹಿನ್ನೆಲೆಯಲ್ಲಿ ಈ ಕಿರು ಹೊತ್ತಗೆಯ ಮೂವರು ವಿದ್ವಾಂಸ ಲೇಖಕರೂ, ಕೋಮುವಾದಿ ಮನೋಧರ್ಮವು ಇತಿಹಾಸ ಲೇಖನದಲ್ಲಿ ಎಂತಹ ವಿರೂಪಣೆಗಳಿಗೆ ಎಡೆಮಾಡಿಕೊಡುತ್ತದೆ ಮತ್ತು ಅವನ್ನು ನಿವಾರಿಸಲು ಯಾವ ದೃಷ್ಟಿಕೋನದಿಂದ ಇತಿಹಾಸ ಲೇಖನ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ. .
©2024 Book Brahma Private Limited.