ನಾಗರಿಕತೆಯ ಸಂಘರ್ಷ

Author : ಎಸ್‌.ಆರ್‌. ರಾಮಸ್ವಾಮಿ

Pages 160

₹ 75.00




Year of Publication: 2009
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

ನಾಗರಿಕತೆಯ ಸಂಘರ್ಷ ವೈಚಾರಿಕ ಪ್ರಬಂಧ ಪುಸ್ತಕವನ್ನು ಲೇಖಕ ಎಸ್.‌ ಆರ್.‌ ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಹಿಂದಿನ ಶತಮಾನಗಳಲ್ಲಿ ಹೋರಾಟಗಳು ಸಾಮ್ರಾಜ್ಯಶಾಹಿಗಳಿಗೂ ಅಧೀನರಾಷ್ಟ್ರಗಳಿಗೂ ನಡುವೆ ನಡೆದಿದ್ದವು. ಸಾಂಪ್ರದಾಯಿಕತೆಗೂ ಆಧುನಿಕತೆಗೂ ನಡುವೆ ವಿರೋಧಭಾವವಿದೆಯೆಂಬ ಮಂಡನೆ ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಮುನ್ನೆಲೆಯಲ್ಲಿತ್ತು. ಬಲಿಷ್ಠದೇಶಗಳ ಆರ್ಥಿಕ ಏಕಸ್ವಾಮ್ಯವೇ ವಿವಿಧ ಸಂಘರ್ಷಗಳ ಮೂಲಕಾರಣವೆಂಬ ಮಂಡನೆ ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದೀಚೆಗೆ ನಡೆದಿತ್ತು. ಜಗತ್ತಿನ ಸೆಣಸಾಟಗಳ ಮೂಲವು ಪ್ರಮುಖ ನಾಗರಿಕತೆಗಳ ಸ್ವರೂಪದಲ್ಲಿಯೆ ಇರುವ ಭಿನ್ನತೆಗಳು ಎಂಬ ವಾದ ಈಚೆಗೆ ಪ್ರಚಲಿತವಾಗಿದೆ. ಆಳಕ್ಕೆ ಹೊಕ್ಕು ನೋಡುವಾಗ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಬಗೆಬಗೆಯ ಸಮಸ್ಯೆಗಳ ಮೂಲದಲ್ಲಿರುವುದು ಎರಡುಭಿನ್ನ ಜೀವನದೃಷ್ಟಿಗಳ ನಡುವಣ ಮುಖಾಮುಖಿಯೇ ಎನ್ನಬೇಕಾಗುತ್ತದೆ. ಮಥಿತಾರ್ಥವೆಂದರೆ – ಹೊರತೋರಿಕೆಗಳು ಹೇಗೇ ಇದ್ದರೂ – ಹಿಂದಿನಿಂದ ಇಂದಿನವರೆಗೆ ಸಂಘರ್ಷಗಳು ನಡೆದಿರುವುದು ಸಭ್ಯತೆಗೂ ಬರ್ಬರತೆಗೂ ನಡುವೆಯೇ ಎಂಬುದು ತಥ್ಯ. ಹೀಗಿರುವುದರಿಂದ, ಈಗಿನ ಜಗದ್‌ವ್ಯಾಪಿ ಸಂಘರ್ಷಗಳನ್ನು ರಾಜಕೀಯ-ಆರ್ಥಿಕ ಆಗುಹೋಗುಗಳ ಹಿನ್ನೆಲೆಯಲ್ಲಷ್ಟೆ ಅರ್ಥೈಸಲೆಳಸುವುದು ಪ್ರಯೋಜನಕರವಲ್ಲ. ತುಮುಲಗಳ ಬೇರುಗಳಿರುವುದು ಎರಡುಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಮನಗಾಣಬೇಕಿದೆ. ಈ ತಾತ್ತ್ವಿಕತೆಯ ಹಲವು ಮಗ್ಗುಲುಗಳ ಅವಲೋಕನವನ್ನು ’ನಾಗರಿಕತೆಗಳ ಸಂಘರ್ಷ’ ಗ್ರಂಥದ ಪ್ರಬಂಧಗಳಲ್ಲಿ ಕಾಣಬಹುದು.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books