ಮನುಸ್ಮೃತಿ ಹಾಗೂ ದಲಿತರು ಕೃತಿಯಲ್ಲಿ ವಿಚಾರವಾದಿ ಜ.ಹೋ. ನಾರಾಯಣಸ್ವಾಮಿ ಅವರು ಮನು ಹೇಗೆ ಜಾತಿ, ವರ್ಣ ವ್ಯವಸ್ಥೆಯನ್ನು ಚಿತ್ರಿಸಿದ್ದಾನೆ. ಅದು ಹೇಗೆ ದಲಿತ ವಿರೋಧಿಯಾಗಿದೆ ಎಂಬುದನ್ನು ವಿವರಿಸಿದ್ದಾರೆ.
“ಮನುವಿನ ಹೆಸರಿನಲ್ಲಿ ವಿಧಿಸಲಾಗಿರುವ, ಮನುಸ್ಮೃತಿಯು ಒಳಗೊಂಡಿರುವ ನೀತಿ ನಿಯಮಗಳು ತಳ ಸಮುದಾಯದವರನ್ನು ಅವಮಾನಿಸುವಂತಿವೆ. ಮನುಷ್ಯರಾಗಿ. ಅವರ ಹಕ್ಕುಗಳನ್ನು ನಾಶಗೊಳಿಸಿ ವ್ಯಕ್ತಿತ್ವವನ್ನು ತುಳಿದು ನುಚ್ಚುನೂರು ಮಾಡುವಂತಿವೆ. ವಿಶ್ವದಾದ್ಯಂತ ನಾಗರಿಕ ಜಗತ್ತಿನಲ್ಲಿ ಮನುಷ್ಯರದೆಂದು ಪರಿಗಣಿಸಿ ನೀಡಲಾಗಿರುವ ಹಕ್ಕುಗಳನ್ನು ಗಮನಿಸಿದರೆ ಮನುಸ್ಮೃತಿಯು ಯಾವುದೇ ಗೌರವಕ್ಕೆ ಅರ್ಹವಲ್ಲ ಹಾಗೂ ಪವಿತ್ರ ಸ್ಮತಿ ಎಂದು ಕರೆಸಿಕೊಳ್ಳುವುದಕ್ಕೆ ಯೋಗ್ಯವಲ್ಲ ಎಂದು ಈ ಸಮ್ಮೇಳನವು ಅಭಿಪ್ರಾಯ ಪಡುತ್ತಾ ತನ್ನ ಅಸಮ್ಮತಿ ವ್ಯಕ್ತಪಡಿಸಲು ಬಯಸುತ್ತದೆ. ಎಂದೇ ಈ ಸಮ್ಮೇಳನದ ಕೊನೆಯಲ್ಲಿ ಧರ್ಮದ ಮುಸುಕು ಹಾಕಿಕೊಂಡು ಸಾಮಾಜಿಕ ತಾರತಮ್ಯದ ಮೂರ್ತರೂಪವಾಗಿರುವ ಈ ಪುಸ್ತಕವನ್ನು ಸುಟ್ಟುಹಾಕುವುದರ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಬಯಸುತ್ತದೆ.'
- ಡಿಸೆಂಬರ್ 25, 1927, 2ಡರ್ ಕೆರೆ ನೀರಿಗಾಗಿ ನಡೆದ ಸತ್ಯಾಗ್ರಹದ ವೇಳೆ ಸಭೆ ಸೇರಿದವರನ್ನುದ್ದೇಶಿಸಿ ಅಂಬೇಡ್ಕರ್ ಆಡಿದ ಮಾತುಗಳು,
ಜ.ಹೊ.ನಾ ಎಂದೇ ಖ್ಯಾತರಾದ ಜ.ಹೊ.ನಾರಾಯಣಸ್ವಾಮಿ ಅವರು 13-06-1941ರಂದು ಹಾಸನ ತಾಲೂಕಿನ ಜನಿವಾರ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಹೊನ್ನಯ್ಯ, ತಾಯಿ ತಿಮ್ಮಮ್ಮ. ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು. ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು. ಮಾನವ ಕುಲಂ ತಾನೋಂದೇ ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚರ್ಚ್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ. ಪ್ರಾಥಮಿಕ ಶಿಕ್ಷಣದಿಂದ ...
READ MORE