ಖ್ಯಾತ ಸಾಹಿತಿ ಡಾ. ಡಿ.ಎಸ್. ನಾಗಭೂಷಣ ಅವರ ಕೃತಿ-ಲೋಹಿಯಾ ಜೊತೆಯಲ್ಲಿ. ಕಾರ್ಲ್ ಮಾಕ್ಸ್, ಮಹಾತ್ಮಗಾಂಧೀಜಿ, ಡಾ. ಅಂಬೇಡ್ಕರ್ ಹಾಗೂ ರಾಮಮನೋಹರ ಲೋಹಿಯಾ ಅವರ ವಿಚಾರಗಳ ವೈವಿಧ್ಯತೆ, ಸಾಮಿಪ್ಯ ಹಾಗೂ ವ್ಯತ್ಯಾಸ ಹೀಗೆ ತರ್ಕಬದ್ಧವಾಗಿ ವಿಶ್ಲೇಷಿಸಿದ ಬರಹಗಳಿವು. ವೈಚಾರಿಕ ವಿಭಿನ್ನತೆ ಇದ್ದರೂ ಈ ಎಲ್ಲ ನಾಯಕರಲ್ಲಿ ಒಂದು ಎಳೆ ಇದೆ-ಅದು ಮಾನವೀಯತೆ. ಕಾಯಕ, ದಾಸೋಹ ದಂತಹ ಆಚರಣೆಗಳು ಸಹ ಈ ಎಲ್ಲರ ವ್ಯಕ್ತಿತ್ವದ ಗಟ್ಟಿತನವೂ ಆಗಿದೆ. ಒಂದು ಕೃತಿಯಲ್ಲಿ ಈ ನಾಯಕರನ್ನು ಮತ್ತು ಅವರ ವ್ಯಕ್ತಿತ್ವದ ಸ್ವರೂಪವನ್ನು ಹೋರಾಟದ ವೈಪರೀತ್ಯಗಳನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE