‘ಮಹಾಮಾರಿ ವೈರಸ್ ಜಗತ್ತು’ ಲೇಖಕ ಡಾ.ಎಂ. ವೆಂಕಟಸ್ವಾಮಿ ಅವರ ಕೃತಿ. ‘2019ನೇ ವರ್ಷದ ಕೊನೆ ತಿಂಗಳಲ್ಲಿ ಚೀನಾದಲ್ಲಿ ಮೊದಲಿಗೆ ಈ ಮಹಾಮಾರಿ ಕೋವಿಡ್-19 ಕಾಣಿಸಿಕೊಂಡಿತು. ಪ್ರಜಾವಾಣಿಯಲ್ಲಿ ಮೊದಲ ಬಾರಿಗೆ (5.2.2020)ನಾನು ಬರೆದ ‘ಕರೋನ:ಕಟ್ಟೆಚ್ಚರವೇ ಪರಿಹಾರ’ ಎಂಬ ಲೇಖನ ಪ್ರಕಟವಾಯಿತು. ಅದಾದ ಮೇಲೆ ಕರೋನ ಬಗ್ಗೆ ಪ್ರಜಾವಾಣಿ, ವಾರ್ತಾಭಾರತಿ ಇನ್ನಿತರ ಪತ್ರಿಕೆಗಳಲ್ಲಿ ನಾಲ್ಕಾರು ಲೇಖನಗಳನ್ನು ಬರೆದೆ. ಜೊತೆಗೆ ಕನ್ನಡ, ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕರೋನ ಬಗೆಗಿನ ಹಲವಾರು ಲೇಖನಗಳನ್ನು ಓದುತ್ತಿದ್ದಂತೆ ನಾನೇ ಒಂದು ಪುಸ್ತಕ ಬರೆದರೆ ಹೇಗೆ ಎಂಬ ಸಣ್ಣ ಆಸೆ ಹುಟ್ಟಿಕೊಂಡಿತು ಎನ್ನುತ್ತಾರೆ ಲೇಖಕ ಎಂ. ವೆಂಕಟಸ್ವಾಮಿ. ಭೂವಿಜ್ಞಾನಿಯಾದ ಎಂ. ವೆಂಕಟಸ್ವಾಮಿ ಅವರು ಈ ಕೃತಿಯಲ್ಲಿ ವೈರಸ್ ಜಗತ್ತಿನ ಕುರಿತು ಅತ್ಯಂತ ಸೂಕ್ಷ್ಮವಿಚಾರಗಳನ್ನು ಬರೆದಿದ್ದಾರೆ. ಈ ಪುಸ್ತಕವು ‘ಇ-ಪುಸ್ತಕ’ ಡಿಜಿಟಲ್ ರೂಪದಲ್ಲಿಯೂ ಪ್ರಕಟಗೊಂಡಿದೆ.
ಮಹಾಮಾರಿ ವೈರಸ್ ಜಗತ್ತು ಕೃತಿಯ ವಿಮರ್ಶೆ
ಈ ಪುಸ್ತಕದಲ್ಲಿ ಇಡೀ ಜಗತ್ತನ್ನೇ ನಲುಗಿಸಿದ ಕೊರೋನಾ ವೈರಸ್ಸಿನ ಜೊತೆಗೆ ಈ ಹಿಂದೆ ಮನುಕುಲವನ್ನು ಅಲುಗಾಡಿಸಿದ ವಿವಿಧ ವೈರಸ್‌ಗಳ ಇತಿಹಾಸವಿದೆ. ವೈರಾಲಜಿ ಎಂದರೆ ಏನು, ಉಪಯುಕ್ತ ವೈರಸ್‌ಗಳು, ವುಹಾನ್‌ನ ವೈರಾಲಜಿ ಇನ್‌ಸ್ಟಿಟ್ಯೂಟ್ ಹಾಗೂ ಭವಿಷ್ಯದಲ್ಲಿ ಮನುಷ್ಯ ಕುಲವನ್ನು ಕಾಡಲಿರುವ ವೈರಸ್‌ಗಳು ಹಾಗೂ ಅವುಗಳನ್ನು ಹೇಗೆ ಎದುರಿಸ ಬೇಕು ಎಂದು ಸರಳವಾಗಿ ವಿವರಿಸುವ ಪುಸ್ತಕ ಇದಾಗಿದೆ.
(ಕೃಪೆ; ಓದುಬರಹ)
©2024 Book Brahma Private Limited.