ಭಾರತದ ಸ್ವಾತಂತ್ರ್ಯಾನಂತರದಲ್ಲಿ ದಲಿತರು ಸಾಂವಿಧಾನಿಕವಾಗಿ ಸವರ್ಣಿಯರ ಸಮಾನ ಸ್ನಾನಮಾನ ಮತ್ತು ಹಕ್ಕಿಗಾಗಿ ಹೋರಾಡುವ ಸಂದರ್ಭದಲ್ಲಿ ಎದುರಾಗಿರುವ ಸಂಘರ್ಷಗಳನ್ನು ಹಿನ್ನೆಲೆಯನ್ನಿಟ್ಟುಕೊಂಡು ಸಮಾನ ಸ್ಥಾನಮಾನಕ್ಕಾಗಿ ಇಂದು ದಲಿತ ಸಮಾಜ ಮತಾಂತರದತ್ತ ವಾಲುತ್ತಿರುವುದರ ಸಾಧಕ ಬಾಧಕಗಳ ಕುರಿತು ಈ ಕೃತಿಯಲ್ಲಿ ವಿಮರ್ಶಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯನಗಳೆಂದರೆ:ದಲಿತರು ಮತ್ತು ಜಾತಿ ,ಚರಿತ್ರೆ ಮತ್ತು ಮತಾಂತರ ,ಮತಾಂತರದ ಕಥನ ,ಅಂಬೇಡ್ಕರ್, ಮತಾಂತರ ಮತ್ತು ದಲಿತರು ,ಬೌದ್ದಧರ್ಮ, ಮತಾಂತರ ಮತ್ತು ದಲಿತರು ,ದಲಿತ ಸಂಘಟನೆಗಳು ಮತ್ತು ಮತಾಂತರ
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದವರು. 1968ರ ಮೇ 20 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ’ಆಧುನಿಕ ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ( 1881-1940)’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ (2001) ಪಡೆದರು. ನಮ್ಮ ಗ್ರಾಮಗಳು ಅಂದು ಇಂದು, ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನ, ಭಾರತೀಯ ಸಮಾಜ ಮತ್ತು ದಲಿತರು, ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ, ದಲಿತ ಚರಿತ್ರೆ ...
READ MORE