ಪ್ರಾಚೀನ ಭಾರತದ ದಾರ್ಶನಿಕ ಸಂಘರ್ಷ ಹಾಗೂ ಅದರ ಸಾಮಾಜಿಕ ಮಹತ್ವದ ಕುರಿತು ಮಾಹಿತಿ ನೀಡುವ ಕೃತಿ ಇದು. ಎಸ್.ಜಿ. ಸರ್ದೇಸಾಯಿ ಅವರು ರಚಿಸಿರುವ ಈ ಕೃತಿಯನ್ನು ಕೆ.ಎಲ್. ಗೋಪಾಲಕೃಷ್ಣ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೆ.ಎಲ್. ಗೋಪಾಲಕೃಷ್ಣರಾವ್ ಅವರು ಮೂಲತಃ ಬೆಂಗಳೂರಿನವರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ವ್ಯಾಸಂಗ ಮಾಡಿದ್ದರು. ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ನೀನಾಸಂ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಸಹಪಾಠಿಯೂ ಆಗಿದ್ದರು. ಕಲಾವಿದ ಆರ್.ಎಸ್. ನಾಯ್ಡು ಹಾಗೂ ಲೇಖಕ ನಿರಂಜನ ಅವರ ನಿಕಟ ಸಂಪರ್ಕವೂ ಇವರಿಗಿತ್ತು. ರಷ್ಯಾದ ರಾಜಧಾನಿ ಮಾಸ್ಕೊದ ರಾದುಗ ಪ್ರಕಾಶನ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ 17ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪ್ರಪಂಚದ ಪ್ರಮುಖ ವಿದ್ಯಮಾನಗಳ ಕುರಿತು ವಿಶ್ವದರ್ಶನ ಶೀರ್ಷಿಕೆಯಡಿ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. 1950ರ ದಶಕದಲ್ಲಿ ಸೋವಿಯತ್ ದೇಶ ಪತ್ರಿಕೆಯಲ್ಲೂ ಕೆಲವು ಕಾಲ ಕರ್ತವ್ಯ ನಿರ್ವಹಿಸಿದ್ದರು. ನವಕರ್ನಾಟಕ ಪ್ರಕಾಶನ ...
READ MORE