ಪಾಪ ಪರಾಕಾಷ್ಟೆ

Author : ಮಂಜುನಾಥ ಉಲವತ್ತಿ ಶೆಟ್ಟರ್

Pages 316

₹ 250.00




Year of Publication: 2020
Published by: ನಿರಂತರ ಪ್ರಕಾಶನ
Address: # 165, 8ನೇ A  ಅಡ್ಡರಸ್ತೆ, 14ನೇ A ಮುಖ್ಯರಸ್ತೆ, ಮೊದಲ ಮಹಡಿ, ಆರ್‍ ಪಿಸಿ ಬಡಾವಣೆ, ವಿಜಯನಗರ, ಬೆಂಗಳೂರು-560104
Phone: 9886830331

Synopsys

ಮಂಜುನಾಥ್ ಉಲವತ್ತಿ ಶೆಟ್ಟರ್ ಅವರು ಬರೆದ ಅಂಕಣ ಬರಹಗಳ ಸಂಕಲನ-ಪಾಪ ಪರಾಕಾಷ್ಟೆ. ಸ್ವಾತಂತ್ರ್ಯಾನಂತರದಲ್ಲಿ ನಮ್ಮ ದೇಶದ ಸಮಸ್ತ ಸಮಸ್ಯೆಗಳು ಪರಿಹಾರವಾಗಿಲ್ಲ. ಸಂವಿಧಾನಾತ್ಮಕ ಹಕ್ಕು ಹಾಗೂ ಆಶಯಗಳಿಗನುಗುಣವಾಗಿ ಅನೇಕ ಪ್ರಗತಿಪರ ಬೆಳವಣಿಗೆಗಳು ನಮ್ಮ ದೇಶದಲ್ಲಿ ಆಗಿವೆಯಾದರೂ ನಿರೀಕ್ಷಿತ ಗುರಿ ತಲುಪಿಲ್ಲವೆಂಬುದು ವಿಷಾದನೀಯ ಹಾಗೂ ವಾಸ್ತವ. ಕುಲಮೂಲ ಉತ್ಪಾದನಾ ಪದ್ಧತಿಯನ್ನು ಸಕಾರಾತ್ಮಕವಾಗಿಯೇ ಶಿಥಿಲಗೊಳಿಸಿದ ಕೈಗಾರಿಕೀಕರಣವು ಸಾಮೂಹಿಕ ಉತ್ಪಾದನಾ ಪದ್ಧತಿಯ ಮೂಲಕ ಹೊಸ ಬೆಳಕನ್ನು ನೀಡಿದ್ದನ್ನು ಅಲ್ಲಗೆಳೆಯಲಾಗದು. ಹೊಸ ಆರ್ಥಿಕ ಪದ್ಧತಿ ಬಂದಾಗ ಹೊಸ ಸಮಸ್ಯೆಗಳು ಬರುತ್ತವೆಯೆಂಬ ‘ಸತ್ಯ’ವನ್ನು ಕೈಗಾರಿಕರಣಕ್ಕೂ, ಜಾಗತೀಕರಣಕ್ಕೂ ಅನ್ವಯಿಸಬಹುದು. . 

ಇತ್ತೀಚಿನ ವರ್ಷಗಳಲ್ಲಿ ಧರ್ಮ, ಸಂಸ್ಕೃತಿ, ದೇಶಭಕ್ತಿ, ದೇಶದ್ರೋಹ, ಸ್ವಾತಂತ್ರ್ಯ ಮುಂತಾದ ಪರಿಕಲ್ಪನೆಗಳಿಗೆ ಅಪಾರ್ಥ ಮತ್ತು ಅಪವ್ಯಾಖ್ಯಾನಗಳನ್ನು ಅಂಟಿಸಿ ಅಬ್ಬರಿಸುವ ‘ಮೂಲಭೂತವಾದಿಗಳು’ ಮುನ್ನೆಲೆಗೆ ಬಂದಿರುವುದು ದೊಡ್ಡ ಸಮಸ್ಯೆಯಾಗಿದೆ, ಈ ಕೃತಿಯಲ್ಲಿರುವ 49 ಬರಹಗಳು ಸಮಸ್ಯೆಗಳ ಸಮಗ್ರತೆಯನ್ನು ತೋರಿವೆ. ಭಾಷೆ ಸಮಸ್ಯೆ, ಶಿಕ್ಷಣ, ಮಹಿಳೆ, ಮಕ್ಕಳು, ಕಿರುತೆರೆ, ವಾಟ್ಸಾಪ್, ಸ್ವಚ್ಚತೆ, ಪ್ರಜಾತಂತ್ರ, ರಾಜಕೀಯ ಕುತಂತ್ರ, ರೈತ, ಉದ್ಯಮ ರಕ್ಷಣೆ, ಕಪ್ಪುಹಣ, ಬಡತನ, ಕಾರ್ಪೊರೇಟ್ ವಲಯ, ತಂತ್ರಜ್ಞಾನ, ಹೀಗೆ ವಸ್ತುವೈವಿಧ್ಯವೇ ತುಂಬಿಕೊಂಡ ವಿವರಣೆ ವಿಶ್ಲೇಷಣೆಗಳ ಹೊರಣವನ್ನು ಪಾಪ ಪರಾಕಾಷ್ಠೆಯಲ್ಲಿ ಉಣಬಡಿಸಲಾಗಿದೆ. ‘ಪಾಪ ಪರಾಕಷ್ಟೆ’ ಎಂಬ ಶೀರ್ಷಿಕೆಯೇ ನಮ್ಮ ದೇಶದ ಅನಿಷ್ಠಗಳು ತಲುಪಿದ ಸ್ಥಿತಿಯನ್ನು ಸೂಚಿಸುತ್ತದೆ.

 ನಮ್ಮ ಸಂಸದೀಯ ಪ್ರಜಾಪ್ರಭುತ್ವ ಎಂಥ ಸ್ಥಿತಿಗೆ ತಲುಪಿದೆಯೆಂಬುದನ್ನು ಲೇಖಕರ ಈ ಮಾತುಗಳು ಸೂಚಿಸುತ್ತದೆ. ‘ಕಪ್ಪುi ಪ್ರಭುತ್ವದಲಿ ಕುರುಡ ಪ್ರಜೆ, ಕುಂಟ ಪ್ರಭುತ್ವದ ಪ್ರಹಸನ’ ಎಂಬ ಲೇಖನದಲ್ಲಿ ಪ್ರಜಾತಂತ್ರವು ತಲುಪುತ್ತಿರುವ ದುಸ್ಥಿತಿ,  ಜನಪ್ರಭುತ್ವವು ‘ಕಾರ್ಪೊರೇಟ್ ಪ್ರಜಾತಂತ್ರ’ವಾಗುತ್ತಿರುವ ಸ್ಥಿತ್ಯಂತರವನ್ನು ಸೂಚಿಸಿದ್ದಾರೆ. ಆಹಾರ ಭದ್ರತೆಯನ್ನು ಕುರಿತು ಬರೆದಿರುವ ಲೇಖನದಲ್ಲಿ ಆಹಾರ ಮತ್ತು ಪ್ರಕೃತಿ ನಡೆಯ ಸಂಬಂಧವನ್ನು ಸೋದಾಹರಣವಾಗಿ ಮಂಡಿಸುತ್ತಾರೆ. 
ಶಿಕ್ಷಣದ ವ್ಯವಸ್ಥೆ ಬೋಧನಾ ಮಾಧ್ಯಮದ ಸಮಸ್ಯೆ ಉನ್ನತ ಶಿಕ್ಷಣದ ಸ್ಥಿತಿಗತಿ ಕುರಿತಂತೆ ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿದ್ದಾರೆ.  ದೇಶದ ಆರ್ಥಿಕ ವಿದ್ಯಮಾನಗಳನ್ನು ಕೂಡ ಅಧ್ಯಯನಶೀಲತೆಯೊಂದಿಗೆ ಕಟ್ಟಿಕೊಡುವ ಪ್ರಜ್ಞಾವಂತಿಕೆಯಿರುವುದು ಇಲ್ಲಿಯ ಲೇಖನಗಳ ವಿಶೇಷತೆ. ತಾವು ಪ್ರತಿಪಾದಿಸುವ ನಿಲುವಿಗೆ ಪೂರಕವಾಗಿ ಅಂಕಿ ಅಂಶಗಳನ್ನು ಆಧಾರವಾಗಿ ಕೊಡುತ್ತಾರೆ, ಪೂರಕ ವಿವರಗಳನ್ನು ಒದಗಿಸುತ್ತಾರೆ. ಎಲ್ಲಾ ಲೇಖನಗಳನ್ನು ಜನಕೇಂದ್ರಿತ ಸಮಾನತೆಯ ಆಶಯಗಳನ್ನು ಅಭಿವ್ಯಕ್ತಿಸುತ್ತಾರೆ.

About the Author

ಮಂಜುನಾಥ ಉಲವತ್ತಿ ಶೆಟ್ಟರ್

ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿಯವರು. ತಂದೆ ರೇವಣಸಿದ್ದಪ್ಪ, ತಾಯಿ ನಾಗಮ್ಮ. ಲೇಖಕರು ಎಂ.ಎ, ಎಂ,ಫಿಲ್ ಪದವೀಧರರು. ಬಳ್ಳಾರಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಆರ್ಥಿಕ, ಪ್ರಚಲಿತ, ವೈಚಾರಿಕ, ವೈಜ್ಞಾನಿಕ, ಸಾಮಾಜಿಕ, ಐತಿಹಾಸಿಕ ಮತ್ತು  ಸಾಂಸ್ಕೃತಿಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸಹಪ್ರಾಧ್ಯಾಪಕರು. ಪ್ರಸ್ತುತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವ್ಯಾಸಂಗ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಪ್ರಗತಿಪರ ಚಿಂತಕರ ಒಕ್ಕೂಟದಲ್ಲಿದ್ದು, ಸೆಮಿನಾರ್, ವಿಶೇಷ ಉಪನ್ಯಾಸಗಳನ್ನು ನೀಡಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ...

READ MORE

Related Books