ಜಾರ್ಜ್ ಆರ್ವೆಲ್ ಆಯ್ದ ವೈಚಾರಿಕ ಪ್ರಬಂಧಗಳು

Author : ಕೆ. ಸತ್ಯನಾರಾಯಣ

Pages 168

₹ 150.00




Published by: ಪರಸ್ಪರ ಪ್ರಕಾಶನ, ಚಿಕ್ಕನಹಳ್ಳಿ ಬೆಂಗಳೂರು
Phone: 9880910113

Synopsys

ಜಾರ್ಜ್‌ ಆರ್ವೆಲ್‌ ಅವರ ಮೂಲ ಹೆಸರು ಎರಿಕ್‌ ಬ್ಲೇರ್‌. 1922–27ರ ಅವಧಿಯಲ್ಲಿ ಆರ್ವೆಲ್‌ ಬರ್ಮಾದ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಕಾರ್ಮಿಕ ವರ್ಗದ, ಬಡವರ ಜೀವನವನ್ನು ಹತ್ತಿರದಿಂದ ಕಾಣಲು, ಅನುಭವಿಸಲು ಇದ್ದ ಕೆಲಸ ಬಿಟ್ಟು, ಗಣಿ, ಹೋಟೆಲ್‌, ಆಸ್ಪತ್ರೆ, ಸೇನೆ, ಖಾಸಗಿ ಶಾಲೆ, ಪುಸ್ತಕದ ಅಂಗಡಿಗಳಲ್ಲಿ ಕೆಲಸ ಮಾಡಿ ಬದುಕು ಸಾಗಿಸುವ ಮೂಲಕ, ಬದುಕಿನ ಬಗ್ಗೆ ವಿಶಿಷ್ಟ ದೃಷ್ಟಿಕೋನ ರೂಪಿಸಿಕೊಂಡವರು. ಬಿಬಿಸಿ, ಟ್ರಿಬ್ಯೂನ್‌ ಮಾಧ್ಯಮ ಸಂಸ್ಥೆಗಳಲ್ಲೂ ಕೆಲಸ ಮಾಡಿ, ನಿರಂತರ ಅಂಕಣ ಬರೆಯುವುದರ ಜತೆಗೆ ಕಾದಂಬರಿಗಳ ರಚನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡವರು. ಆರ್ವೆಲ್‌ ಅವರ ಆಯ್ದ ಕೆಲವು ವೈಚಾರಿಕ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿ  ಇಲ್ಲಿ ಕೊಡಲಾಗಿದೆ.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books