ಪ್ರಸ್ತುತ ದಿನಗಳಲ್ಲಿ ಎಲ್ಲವೂ ಪೂಜೆಯ ವಸ್ತುವಾಗುತ್ತಿದೆ. ಪ್ರಜ್ಞಾಪೂರ್ವಕವಾಗಿ ಅಂಬೇಡ್ಕರ್, ನಾರಾಯಣಗುರು ಎಲ್ಲ ಬಿಡಿ, ಕೊನೆಗೆ ನಮ್ಮ ಸಂವಿಧಾನವೂ ಅದೇ ದಾರಿಯಲ್ಲಿ ನಡೆಯುತ್ತಿದೆ. ಒಂದೆಡೆ ಸಂವಿಧಾನ ದಿನವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಲೇ, ಸಂವಿಧಾನಕ್ಕೆ ಬಹಿರಂಗವಾಗಿ ಧಕ್ಕೆಯಾಗುತ್ತಿದ್ದಾಗಲೂ ಅದರ ಕುರಿತಂತೆ ವೌನವಾಗುತ್ತೇವೆ. ಪ್ರಜ್ಞೆಯಾಗಬೇಕಾದುದು ಪೂಜೆಯಾದಾಗ ಆಗುವ ದುರಂತ ಇದು. ತಮ್ಮೆಲ್ಲ ಬರಹಗಳಲ್ಲಿ ಜನರ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಉದ್ದೇಶವನ್ನು ಲೇಖಕರು ಹೊಂದಿದ್ದಾರೆ. ನಾರಾಯಣಗುರು, ಪೆರಿಯಾರ್, ಕ್ರಾಂತಿಗುರು ಲಾಹೂಜಿ ಸಾಳ್ವ, ತುಳುವರು ನಂಬಿದ ಸತ್ಯಗಳು, ದೇವರ ದಾಸಿಮಯ್ಯ ಹೀಗೆ ಈ ಸಮಾಜಕ್ಕೆ ಚೈತನ್ಯ ತುಂಬಿದ ಬೇರೆ ಬೇರೆ ವ್ಯಕ್ತಿ ಶಕ್ತಿಗಳನ್ನು ಮುಂದಿಟ್ಟು ಅವರು ವರ್ತಮಾನದ ದುರಂತಗಳನ್ನು ಇಲ್ಲಿ ಚರ್ಚಿಸುತ್ತಾರೆ. ಇಂದಿನ ದಿನಗಳಲ್ಲಿ ಆ ಎಲ್ಲ ಚಿಂತನೆಗಳು ನಮ್ಮ ಪ್ರಜ್ಞೆಯಾಗದೇ ಉಳಿದಿರುವ ಕಾರಣದಿಂದ ನಡೆಯುತ್ತಿರುವ ಅನಾಹುತಗಳನ್ನು ಅವರು ಎಚ್ಚರಿಸುತ್ತಾರೆ. ಈ ಕೃತಿಯಲ್ಲಿ ಒಟ್ಟು 27 ಲೇಖನಗಳಿವೆ.
ತಮ್ಮ ವೈಚಾರಿಕ ಬರೆಹಗಳಿಂದ ಹೆಸರುವಾಸಿಯಾಗಿದ್ದ ಸಾಹಿತಿ-ವಾಗ್ಮಿ ರವಿ ರಾ.ಅಂಚನ್ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪುಪಾದೂರು ಮಡಂತೋಟದವರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮುಂಬೈನ ಅಂಧೇರಿಯ ನಿವಾಸಿಯಾಗಿದ್ದರು. ರಿಲಾಯನ್ಸ್ ಸಂಸ್ಥೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ, ಕರ್ನಾಟಕ ಸಂಘ ಮುಂಬಯಿ, ಗೊರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ವೈಚಾರಿಕ ಚಿಂತನೆಗಳಿಂದ ಕನ್ನಡ ನಾಡಿನ ಸಾಹಿತಿಗಳನ್ನು ಚಿಂತನೆಗೆ ಹಚ್ಚಿವಂತೆ ಮಾಡುವ ಲೇಖಕರಾಗಿದ್ದರು. ’ಯಕ್ಷರಂಗ’ ಅವರ ಮೊದಲ ಕೃತಿ. ಅವರು ಸುಮಾರು 21ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಮಾಯಂದಲ್, ಕಲ್ಲುರ್ಟಿ ಅವರ ಇಂಗ್ಲಿಷ್ ಕೃತಿಗಳು. ಇವರ ಒಂದು ಕೃತಿ ಮರಾಠಿ ಅನುವಾದ ...
READ MORE