ಲೇಖಕ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಬರೆದ ಕೃತಿ-ಕನ್ನಡ ಕಥಾ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಹಾಗೂ ಇತರ ಲೇಖನಗಳು. ಕನ್ನಡದ ನೆಲವು, ಕೋಮು ಸಾಮರಸ್ಯಕ್ಕೆ ಹೆಸರುವಾಸಿ. ಅದು ಎಲ್ಲ ಧರ್ಮೀಯರನ್ನು ಒಳಗೊಂಡು ತನ್ನ ಹಿರಿಮೆಯನ್ನು ಸಾಬೀತುಪಡಿಸುತ್ತಲೇ ಬಂದಿದೆ. ಇದು ಕನ್ನಡ ಸಾಹಿತ್ಯದ ಕಥಾ ವಲಯದ ಔನ್ನತ್ಯವೂ ಹೌದು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯವು ಕನ್ನಡ ಸಾಹಿತ್ಯದಲ್ಲಿ ಉತ್ತಮ ಗುಣಮಟ್ಟ್ದ ಸಾಹಿತ್ಯ ನೀಡುತ್ತಲೇ ಬಂದಿದೆ. ಅವು ಮಾನವೀಯತೆಯನ್ನು ಧ್ವನಿಸುವ ಅಂತಃಕರಣಗಳಾಗಿವೆ ಎನ್ನುವುದನ್ನು ತಮ್ಮ ವಿಸ್ತಾರ ಓದಿನ ಹಾಗೂ ಅನುಭವದ ಗಟ್ಟಿತನದಿಂದ ಕಂಡುಕೊಂಡ ವಿಚಾರಗಳನ್ನು ವಿದ್ವತ್ ಪೂರ್ಣವಾಗಿ ಇಲ್ಲಿಯ ಬರಹಗಳಲ್ಲಿ ಲೇಖಕರು ಮಂಡಿಸಿದ್ದಾರೆ.
ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...
READ MORE