‘ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಕೃತಿ ರಾಜ್ಯಶಾಸ್ತ್ರ. ‘ನಮೋ ಧರ್ಮಾಯ ಮಹತೇ’ ಎಂಬುದು ಕೃತಿಯ ಉಪಶೀರ್ಷಿಕೆ. ಪ್ರತಿಯೊಂದು ಆಡಳಿತಕ್ಕೂ ಒಂದು ಧರ್ಮ ಇರುತ್ತದೆ. ಆ ಧರ್ಮವನ್ನು ಪಾಲಿಸಿಯೇ ಆಡಳಿತ ಮಾಡಿದರೆ ಮನುಕುಲಕ್ಕೆ ಪ್ರಯೋಜನ. ತಪ್ಪಿದರೆ, ಅದು ನಿಸರ್ಗ ವಿರೋಧಿಯೂ, ಮಾನವೀಯ ವಿರೋಧಿಯೂ ಆಗುತ್ತದೆ. ಆಡಳಿತ ಹಾಗೂ ಧರ್ಮದ ಹಿನ್ನೆಲೆಯಲ್ಲಿ ರಾಜ್ಯಶಾಸ್ತ್ರವನ್ನು ಅದರ ಪ್ರಾಮುಖ್ಯತೆಯನ್ನು, ಪ್ರಾಯೋಗಿಕತೆಯಲ್ಲಿ ಉಂಟಾಗುವ ವೈರುಧ್ಯ, ವಿಪರ್ಯಾಸಗಳನ್ನು ಕುರಿತು ಚರ್ಚಿಸಿದ ಕೃತಿ ಇದು. ರಾಜ್ಯಶಾಸ್ತ್ರ ಹಾಗೂ ಧರ್ಮ ಕುರಿತ ಎಲ್ಲ ಆಯಾಮಗಳಲ್ಲಿರುವ ಲೇಖಕರ ಆಳ ಜ್ಞಾನದ ಸಂಕೇತವಾಗಿ ಈ ಕೃತಿ ಮೂಡಿಬಂದಿದೆ.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE