ಬಿ.ಎಂ.ಶ್ರೀಸ್ಮಾರಕ ಪ್ರತಿಷ್ಠಾನದ ದಶಮಾನೋತ್ಸವ ಸಂದರ್ಭದಲ್ಲಿ ಪ್ರಕಟಿಸಿದ ಪುಸ್ತಕಗಳಲ್ಲಿ ಡಾ. ಜಿ. ರಾಮಕೃಷ್ಣ ಅವರ “ವೈಚಾರಿಕ ಜಾಗೃತಿ' ಎಂಬ ಪುಸ್ತಕವೂ ಸೇರಿದೆ. ಈ ಕೃತಿಯ ವೈಶಿಷ್ಟ್ಯವೆಂದರೆ ಇಲ್ಲಿರುವ ವಿಚಾರಗಳು ಎಲ್ಲ ಕಾಲಕ್ಕೂ ಸಲ್ಲುವಂತಹವು; ಮೌಲಿಕವಾದವು. ಈ ಕೃತಿ ಪ್ರಾಚೀನ ಭಾರತದ ವೈಚಾರಿಕತೆ ಹಾಗೂ ವಿವೇಚನೆಗಳನ್ನು, ವಿಚಾರ ಕಂದಾಚಾರಗಳ ಸಂಘರ್ಷವನ್ನು ವಿವೇಚಿಸುತ್ತದೆ.
ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...
READ MORE