ರೋಹಿತ್ ಚಕ್ರತೀರ್ಥ ಅವರು ಬರೆದ ಕೃತಿ-ತ್ರಿಶಂಕು ನರಕ. ಅಭಿವೃದ್ಧಿ ನೆಪದಲ್ಲಿ ನಗರಗಳು ಮಲೀನಗೊಳ್ಳುತ್ತಿವೆ. ಬದುಕು ಉಸಿರುಗಟ್ಟುತ್ತಿದೆ. ಉದ್ಯೋಗ ಅರಸಿ ಕಾರ್ಮಿಕರು ನಗರಗಳತ್ತ ಧಾವಿಸಿ ತಮ್ಮ ಅಮೂಲ್ಯ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಆಧುನಿಕ ಥಳಕು-ಬಳಕಿಗೆ ಸೋತು ತಮ್ಮತನವನ್ನು ಮರೆಯುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎಂಬ ಭಾವನೆ ಬೇರೂರುತ್ತಿದೆ. ಇಂತಹ ಸಂಗತಿಗಳತ್ತ ಲೇಖಕರು ಚರ್ಚಿಸಿ, ಓದುಗರನ್ನೂ ಚಿಂತನೆಗೀಡು ಮಾಡುವ ಕೃತಿ ಇದು.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE