ತನ್ನತನದ ಹುಡುಕಾಟ

Author : ರಹಮತ್ ತರೀಕೆರೆ

Pages 140

₹ 80.00




Year of Publication: 2011
Published by: ಅಂತಃಕರಣ ಪ್ರಕಾಶನ
Address: "ಶ್ರೇಯಸ್ ನಿಲಯ", ಅಪ್ಪಾಜಿ ರಾವ್ ಕಾಂಪೌಂಡ್, ಕೋಟೆ ರಸ್ತೆ, ಶಿವಮೊಗ್ಗ - 577 202
Phone: 94487801444

Synopsys

‘ತನ್ನತನದ ಹುಡುಕಾಟ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ರಹಮತ್ ತರೀಕೆರೆ ಅವರ ಪ್ರಾತಿನಿಧಿಕ ಚಿಂತನೆಗಳ ಸಂಕಲನ. ಈ ಕೃತಿಗೆ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ.. “ಧರ್ಮ, ಸಂಸ್ಕೃತಿ, ಇತಿಹಾಸದುದ್ದಕ್ಕೂ ವಿಕೃತಿಗೆ ಬಲಿಯಾಗುತ್ತಾ ಬಂದ ರಾಜಕೀಯಗಳೆಲ್ಲ ಮೇಲ್ನೋಟಕ್ಕೆ ಕಾಣುವಷ್ಟು ಸತ್ಯ, ಸರಳ, ಸುಂದರವಾಗಿಲ್ಲ. ಅಧ್ಯಯನ ಮತ್ತು ನಿಖರವಾದ ತಾತ್ವಿಕ ಒಲವು ಇಲ್ಲದ ಯಾರಿಗಾದರೂ ಇದನ್ನು ಆರ್ಥಮಾಡಿಕೊಳ್ಳುವುದು ಕಷ್ಟ. ಈ ರೀತಿ ಇತಿಹಾಸದ ಅಡ್ಡಾದಿಡ್ಡಿ ದಾರಿಯಲ್ಲಿ ದಿಕ್ಕು ತೋಚದೆ ನಿಂತ ಅಸಹಾಯಕ ಮನುಷ್ಯನನ್ನು ಕೈಹಿಡಿದು ನಡೆಸುವವರು ಬೇಕಾಗುತ್ತದೆ. ತನ್ನ ಪ್ರತಿಸಂಸ್ಕೃತಿ'ಯ ದಿನಗಳಿಂದಲೇ ಡಾ.ರಹಮತ್ ತರೀಕೆರೆ ಅವರು ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅವರೊಬ್ಬ ಆರಾಮಕುರ್ಚಿ ವಿದ್ವಾಂಸರಲ್ಲ. ಒಬ್ಬ ಆಲೆಮಾರಿ ಸಂಶೋಧಕ, ಅವರ ತನ್ನತನದ ಹುಡುಕಾಟ ನಮ್ಮೆಲ್ಲರ ಹುಡುಕಾಟ ಕೂಡಾ ಆಗಿರುವುದರಿಂದ ಈ ಅಲೆದಾಟದಲ್ಲಿ ಅವರ ಬರವಣಿಗೆಗಳ ಓದುಗರಾದ ನಾವೆಲ್ಲ ಸಂಗಾತಿಗಳು, ಈ ಹುಡುಕಾಟದ ಹಾದಿಯಲ್ಲಿ ಅವರು ಕರ್ನಾಟಕದ ಸೂಫಿಗಳು ಮತ್ತು ನಾಥಪಂಥದ ಬಗೆಗಿನ ಹೊಸಲೋಕವನ್ನು ಪರಿಚಯಿಸಿ ಬೆರಗುಗೊಳಿಸುತ್ತಾರೆ. ಆಹಾರದ ರಾಜಕೀಯವನ್ನು ಅನಾವರಣಗೊಳಿಸುತ್ತಾರೆ, ಯಶೋಧರೆಯಂತವರ ಕಷ್ಟಗಳನ್ನು ಹೇಳಿ ಹೃದಯ ಮಿಡಿಯುವಂತೆ ಮಾಡುತ್ತಾರೆ.

ರಾಜ್‌ ಕುಮಾರ್ ಸಾವಿನಿಂದಾಗಿ ಸತ್ತವರ ಕತೆ ಹೇಳಿ ಮನಸ್ಸು ಭಾರವಾಗಿಸುತ್ತಾರೆ. ಮೂಲಭೂತವಾದಿಗಳ ಹುನ್ನಾರಗಳನ್ನು ಬಯಲುಗೊಳಿಸಿ ಒಳಗಣ್ಣು ತೆರೆಸುತ್ತಾರೆ. ಬರವಣಿಗೆ ಎನ್ನುವುದು ರಹಮತ್ ಪಾಲಿಗೆ ಬೌದ್ಧಿಕ ವಿಳಾಸ ಅಲ್ಲ, ಸಾಮಾಜಿಕ ಜವಾಬ್ದಾರಿಯ ಅಭಿವ್ಯಕ್ತಿ, ಮೈಗೆ ಎಣ್ಣೆಹಚ್ಚಿಕೊಂಡವರಂತೆ ವಿವಾದದ ಸುಳಿಗೆ ಸಿಗದೆ ಅತೀ ಎಚ್ಚರಿಕೆ ಮತ್ತು ಲೆಕ್ಕಾಚಾರದಿಂದ ಬರೆಯುತ್ತಿರುವ ಹಾಗೂ ಬದುಕುತ್ತಿರುವ ವರ್ತಮಾನದ ಅನೇಕ ಲೇಖಕರ ನಡುವೆ ರಹಮತ್‌ ಭಿನ್ನರಾಗಿ ಕಾಣುತ್ತಿರುವುದು ಇದೇ ಕಾರಣಕ್ಕೆ. ವೈಚಾರಿಕ ಸ್ಪಷ್ಟತೆ, ವಿಸ್ತಾರವಾದ ಅಧ್ಯಯನ ಮನುಷ್ಯಪ್ರೀತಿ ಮತ್ತು ನನ್ನಂತಹವರು ಅಸೂಯೆಪಡುವಂತೆ ಭಾಷೆಯನ್ನು ದುಡಿಸಿಕೊಳ್ಳುವ ಬರವಣಿಗೆಯ ಶೈಲಿ ರಹಮತ್ ಅವರ ಶಕ್ತಿ, ತಾವು ನಂಬಿದ ವಿಚಾರಗಳನ್ನು ಒಬ್ಬ ನುರಿತ ವಕೀಲರಂತೆ ವಾದ- ಪುರಾವೆಗಳ ಮೂಲಕ ಅವರು ಮಂಡಿಸುತ್ತಾರೆ. ಬಾಬಾಬುಡನ್‌ಗಿರಿ: ಸೂಫಿ ಮತ್ತು ದತ್ತ ಲೇಖನ ನೇರವಾಗಿ ಪ್ರಮಾಣಪತ್ರದ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಷ್ಟು ಪರಿಪೂರ್ಣವಾಗಿದೆ. ಆದ್ದರಿಂದಲೇ ಅವರ ಬರವಣಿಗೆಗಳನ್ನು ಒಪ್ಪದವರು ಇರಬಹುದು, ಆದರೆ ತಪ್ಪು ಎನ್ನುವವರು ಇರಲಾರರು. ಏಕಸಂಸ್ಕೃತಿಯ ಒತ್ತಡವನ್ನು ವಿರೋಧಿಸುತ್ತಾ, ಬಹುಸಂಸ್ಕೃತಿಯ ಒತ್ತಾಯಗಳಿಗೆ ಕ್ರಿಯಾತ್ಮಕವಾಗಿ ಸ್ಪಂದಿಸುತ್ತಲೇ ಬರೆಯುತ್ತಿರುವ ರಹಮತ್ ಪರ್ಯಾಯ ಸಂಸ್ಕೃತಿಯ ಹುಡುಕಾಟದಲ್ಲಿ ಪ್ರಮುಖ ಹೆಸರು. ಎಲ್ಲವನ್ನೂ, ಎಲ್ಲರನ್ನೂ ಜಾತಿ-ಧರ್ಮಗಳ ಚಾಳೀಸಿನಲ್ಲಿ ನೋಡುವ ಭಾರತೀಯ ಸಾಂಪ್ರದಾಯಿಕ ಮನಸ್ಸುಗಳ ನಡುವೆ ರಹಮತ್ ಅವರಂತಹವರಿಗೆ ಬರೆಯುವುದೆಂದರೆ ಕತ್ತಿಯಂಚಿನ ದಾರಿಯೇ ಹೌದು. ಆದರೆ ಅವರು ಒಂಟಿಯಲ್ಲ. ನಾವೆಲ್ಲ ಜತೆಗಿದ್ದೇವಲ್ಲ. ಎಂದಿದ್ದಾರೆ ದಿನೇಶ್ ಅಮೀನ್‌ಮಟ್ಟು.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books