ಕುಮಾರಿಲ ಭಟ್ಟ

Author : ಎಂ. ಪ್ರಭಾಕರ ಜೋಷಿ

Pages 160

₹ 50.00




Year of Publication: 2001
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಸುಮಾರಾಗಿ ಕ್ರಿ. ಶ. ೬-೮ನೆಯ ಶತಮಾನಗಳ ನಡುವೆ ಬಂದ ಕುಮಾರಿಲ ಭಟ್ಟ ಭಾರತದ ದರ್ಶನಶಾಸ್ತ್ರದ ಇತಿಹಾಸದಲ್ಲಿ ಪ್ರಮುಖ ಹೆಸರು. ಮಹಾ ವಿದ್ವಾಂಸನೆಂದೂ ತಾರ್ಕಿಕನೆಂದೂ ಹೆಸರಾದ ಈತನ ಕೊಡುಗೆಯು ಭಾರತದ ದರ್ಶನಗಳ ಇತಿಹಾಸಕ್ಕೆ ಬಹಳ ಮುಖ್ಯವಾದದ್ದು ಎಂದು ವಿದ್ವಾಂಸರೆಲ್ಲರೂ ಒಪ್ಪುತ್ತಾರೆ. ಆಧುನಿಕ ಮನಸ್ಸುಗಳಿಗೆ ಅಷ್ಟಾಗಿ ಪರಿಚಿತನಲ್ಲದ ಚಿಂತಕನ ವಿಚಾರಗಳನ್ನು ಸ್ಥೂಲವಾಗಿ ಆ ನಿರ್ದಿಷ್ಟ ಸಂದರ್ಭದ ಸಮೇತ ಪರಿಚಯಿಸುವುದು ಪ್ರಸ್ತುತ ಪುಸ್ತಕದ ಉದ್ದೇಶ. ಈ ಪುಸ್ತಕದ ಮೊದಲನೆಯ ಭಾಗವು ಕುಮಾರಿಲನ ಸಂದರ್ಭ ಮತ್ತು ಚಿಂತನೆಗಳ ಸ್ಥೂಲ ನೋಟವನ್ನು ಒದಗಿಸಿಕೊಡುತ್ತದೆ; ಎರಡನೆಯ ಭಾಗದಲ್ಲಿ ಈತನ ಆಯ್ದ ಬರಹಗಳ ಕನ್ನಡ ಅನುವಾದವಿದೆ. ಹಿನ್ನುಡಿಯಲ್ಲಿ ಕೀರ್ತಿನಾಥ ಕರ್ತಕೋಟಿಯವರು ಈ ಚಿಂತನೆಗಳು ಇವತ್ತಿನ ತಾತ್ವಿಕ ಮತ್ತು ಭಾಷಾಶಾಸ್ತ್ರೀಯ ಅಧ್ಯಯನಕ್ಕೂ ಹೇಗೆ ಉಪಯುಕ್ತ ಆಗಬಲ್ಲದು ಎಂಬ ಕುರಿತು ಚರ್ಚೆಯೊಂದನ್ನು ಆರಂಭಿಸಿದ್ದಾರೆ.

About the Author

ಎಂ. ಪ್ರಭಾಕರ ಜೋಷಿ

ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ  ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು. ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ...

READ MORE

Related Books